ಚೆನ್ನೈಯಲ್ಲಿ ಪಂದ್ಯ ರದ್ದು: ಸಿಎಸ್ಕೆ ಅಭಿಮಾನಿಗಳಿಗೆಂದೇ ಚೆನ್ನೈಯಿಂದ ಪುಣೆಗೆ ವಿಶಲ್ ಪೋಡು ಎಕ್ಸ್ ಪ್ರೆಸ್ ರೈಲು!

ನ್ಯೂಸ್ ಕನ್ನಡ ವರದಿ-(19.04.18): ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಹಲವು ಕಾಲಗಳಿಂದ ಕಾವೇರಿ ನದಿ ನೀರಿನ ಹಂಚಿಕೆ ಕುರಿತಾದಂತೆ ವಿವಾದಗಳು ನಡೆಯುತ್ತಲೇ ಇದೆ. ಇದೀಗ ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆ ಮಾಡಬೇಕೆಂದು ತಮಿಳೀಗರು ಪಟ್ಟು ಹಿಡಿದು ಪ್ರತಿಭಟನೆ ಮಢುತ್ತಿದ್ದು, ಮೊದಲ ಪಂದ್ಯದಲ್ಲೇ ಕ್ರೀಡಾಂಗಣಕ್ಕೆ ಚಪ್ಪಲಿ ಎಸೆದಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೈನ ಎಲ್ಲಾ ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ನ ಪಂದ್ಯವು ಪುಣೆಯಲ್ಲಿ ನಡೆಯುತ್ತಿದ್ದು, ಚೆನ್ನೈ ಅಭಿಮಾನಿಗಳಿಗೆಂದೇ ವಿಷಲ್ ಪೋಡು ಎಕ್ಸ್ಕ ಪ್ರೆಸ್ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ನೂರಾರು ಅಭಿಮಾನಿಗಳು ಸಿಎಸ್‌ಕೆ ತಂಡದ ಹಳದಿ ಜರ್ಸಿ ತೊಟ್ಟು ಚೆನ್ನೈನಿಂದ ರೈಲುಯಾನ ಆರಂಭಿಸಿದ್ದಾರೆ. ಚೆನ್ನೈ ತಂಡದ ಆಟಗಾರರನ್ನು ಹುರಿದುಂಬಿಸಲು ಈ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿರುವ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಉಚಿತ ಪಾಸ್‌ ಮತ್ತು ಊಟ, ವಸತಿಯ ವ್ಯವಸ್ಥೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವೇ ಮಾಡಿದೆ.

Leave a Reply

Your email address will not be published. Required fields are marked *