ನ್ಯಾ.ಲೋಯಾ ಕುರಿತು ತೀರ್ಪು ನೀಡಿದ 30 ನಿಮಿಷಗಳಲ್ಲಿ ಸುಪ್ರೀಮ್ ಕೋರ್ಟ್ ವೆಬ್ ಸೈಟ್ ಹ್ಯಾಕ್!

ನ್ಯೂಸ್ ಕನ್ನಡ ವರದಿ-(19.04.18): ಗುರುವಾರ ಬಿ.ಹೆಚ್.ಲೋಯಾ ಪ್ರಕರಣದ ತೀರ್ಪು ಪ್ರಕಟಿಸಿದ 30 ನಿಮಿಷದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ಅಧಿಕೃತ ವೆಬ್ ಸೈಟ್ supremecourtofindia.nic.in ದುಷ್ಕರ್ಮಿಗಳಿಂದ ಹ್ಯಾಕ್ ಮಾಡಲ್ಪಟ್ಟಿದೆ ಎಂದು ವರದಿಯಾಗಿದೆ.

ಸುಪ್ರೀಮ್ ಕೋರ್ಟ್ ಮೂಲಗಳ ಪ್ರಕಾರ ನ್ಯಾಯಾಲಯದ ಅಧಿಕೃತ ವೆಬ್ ಸೈಟ್ ಹ್ಯಾಕ್ ಮಾಡುವ ಪ್ರಯತ್ನಗಳು ಕಂಡು ಬಂದಿರುವುದರ ಹಿನ್ನಲೆಯಲ್ಲಿ ಭದ್ರತೆಯ ಹಿತ ದೃಷ್ಟಿಯಿಂದ ವೆಬ್ ಸೈಟನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದ್ದು, ಸರಿರಡಿಸುವ ಪ್ರಯತ್ನಗಳು ಮುಂದುವರಿದಿದೆ. ವೆಬ್ ಸೈಟ್ ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದ್ದು, ಅದರ ನಂತರ ಕಾರ್ಯನಿರ್ವಹಿಸಲಿದೆ.

ಚೈನೀಸ್ ಹ್ಯಾಕರ್ಸ್ ಗಳ ಉಪಟಳದಿಂದಾಗಿ ಎರಡು ವಾರಗಳ ಹಿಂದೆ ಸರಕಾರಿ ಸ್ವಾಮ್ಯದ ಹಲವು ವೆಬ್ ಸೈಟ್ ಗಳು ಕಾರ್ವನಿರ್ವಹಣೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಈ ಕಾರಣದಿಂದ ನ್ಯಾಶನಲ್ ಇನ್ಫೋರ್ಮೆಟಿಕ್ ಸೆಂಟರ್ ಅಧೀನದಲ್ಲಿರುವ ಹತ್ತು ವೆಬ್ ಸೈಟ್ ಗಳು ಕಾರ್ಯ ನಿರ್ವಹಿಸಲು ವಿಫಲವಾಗಿದೆ ಎಂದು ರಾಷ್ಟ್ರೀಯ ಸೈಬರ್ ಭದ್ರತಾ ಮುಖ್ಯಸ್ಥ ಗುಲ್ಶನ್ ರೈ ಹೇಳಿದ್ದಾರೆ.

Leave a Reply

Your email address will not be published. Required fields are marked *