ಇಂದು ನಾಮಪತ್ರ ಸಲ್ಲಿಸಿದ ಶ್ರೀಮಂತ ರಾಜಕಾರಣಿ ಡಿ.ಕೆ.ಶಿವಕುಮಾರ್ ಆಸ್ತಿ ಎಷ್ಟು ಗೊತ್ತೇ?
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ರಾಜ್ಯದ ಪ್ರಭಾವಿ ನಾಯಕ, ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಡಿ.ಕೆ.ಶಿವಕುಮಾರ್ ಇಂದು ನಾಮಪತ್ರ ಸಲ್ಲಿಸಿದರು. ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು ಈ ವೇಳೆ ತಾವು ಹೊಂದಿರುವ ಆಸ್ತಿಯ ವಿವರವನ್ನು ಕೂಡ ಸಲ್ಲಿಸಬೇಕಾಗುತ್ತದೆ.
ಮನೆ ದೇವರು ಕಂಕೇರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕನಕಪುರದ ತಾಲೂಕು ಕಚೇರಿಗೆ ತೆರಳಿ ಡಿಕೆಶಿ ನಾಮಪತ್ರ ಸಲ್ಲಿಸಿದರು. ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು ಈ ವೇಳೆ ತಾವು ಹೊಂದಿರುವ ಆಸ್ತಿಯ ವಿವರವನ್ನು ಕೂಡ ಸಲ್ಲಿಸಬೇಕಾಗುತ್ತದೆ. ನಾಮಪತ್ರ ಸಲ್ಲಿಸಿದ ವೇಳೆ ಡಿಕೆಶಿ ಆಸ್ತಿಯ ವಿವರ ಬಹಿರಂಗವಾಗಿದ್ದು, ಇವರು ಬಹುಕೋಟಿ ಆಸ್ತಿಯ ಒಡೆಯರಾಗಿದ್ದಾರೆ.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆಸ್ತಿ 548 ಕೋಟಿ. ಮಗಳ ಆಸ್ತಿ 102.88 ಕೋಟಿ, ಡಿಕೆಶಿ ಪತ್ನಿ ಆಸ್ತಿ 86.95 ಕೋಟಿ. ಡಿಕೆಶಿ ಕೈಯಲ್ಲಿ 6.49 ಲಕ್ಷ ಇದೆ. ಇನ್ನು 2 ಕೆಜಿ 184 ಗ್ರಾಂ ಚಿನ್ನ, 12 ಕೆಜಿ 600 ಗ್ರಾಂ ಬೆಳ್ಳಿ ಇದೆ. ಚಿನ್ನಾಭರಣ 1 ಕೆಜಿ 66 ಗ್ರಾಂ, 321 ಗ್ರಾಂ ಡೈಮಂಡ್ ಇದೆ. ಡಿಕೆಶಿ ಪತ್ನಿ ಉಷಾ ಬಳಿ ಬರೋಬರಿ 2 ಕೆಜಿ 600 ಗ್ರಾಂ, ಮಗ ಆಕಾಶ್ ಕೆಂಪೇಗೌಡ ಬಳಿ 615 ಗ್ರಾಂ ಚಿನ್ನ, ಮಗಳು ಐಶ್ವರ್ಯ ಬಳಿ 950 ಗ್ರಾಂ ಚಿನ್ನವಿದೆ. ಮಗಳ ಆಭರಣ ಹೆಸರಲ್ಲಿ 675 ಗ್ರಾಂ ಚಿನ್ನ ಇದೆ.