ದುಬೈ ರಾಫೆಲ್ ಲಾಟರಿ: ಕೇರಳದ ವ್ಯಕ್ತಿಗೆ ಒಲಿದ ಬರೋಬ್ಬರಿ 21.21ಕೋಟಿ ರೂ. ಬಹುಮಾನ!
ನ್ಯೂಸ್ ಕನ್ನಡ ವರದಿ-(07.04.18): ಅದೃಷ್ಟವೆನ್ನುವುದು ಎಲ್ಲರಿಗೂ ದಕ್ಕುವುದಿಲ್ಲ. ಅದೃಷ್ಟ ಜೊತೆಗಿದ್ದರೆ ಬದುಕಿನಲ್ಲಿ ಯಾರೂ ಸೋಲಲು ಸಾಧ್ಯವಿಲ್ಲ. ಇದೀಗ ಕೇರಳದಲ್ಲಿ ಚಾಲಕ ವೃತ್ತಿಯನ್ನು ನಡೆಸುತ್ತಿದ್ದ ವ್ಯಕ್ತಿಯೊರ್ವರಿಗೆ ದುಬೈನ ರಾಫೆಲ್ ಲಾಟರಿ ಸ್ಫರ್ಧೆಯಲ್ಲಿ ಭರ್ಜರಿ ಬಹುಮಾನ ಮೊತ್ತ ಬಂದಿದೆ. ದುಬೈನ 12 ಮಿಲಿಯನ್ ದಿರ್ಹಮ್ ಅಂದರೆ ಬರೋಬ್ಬರಿ 21.21 ಕೋಟಿ ರೂಪಾಯಿಗಳ ಮೊತ್ತವು ಕೇರಳದ ವ್ಯಕ್ತಿಗೆ ಲಾಟರಿ ಟಿಕೆಟ್ ರೂಪದಲ್ಲಿ ಆಗಮಿಸಿದೆ. 2016ರಲ್ಲಿ ದುಬೈಗೆ ಆಗಮಿಸಿದ ಖಾಸಗಿ ಕಂಪೆನಿಯೊಂದರಲ್ಲಿ ಚಾಲಕ ವೃತ್ತಿಯನ್ನು ನಿರ್ವಹಿಸುತ್ತಿದ್ದ ಜಾನ್ ವರ್ಗಿಸ್ ಎಂಬವರೇ ಈ ಅದೃಷ್ಟಶಾಲಿ.
ಈ ಕುರಿತಾದಂತೆ ಮಾತನಾಡಿದ ಜಾನ್ ವರ್ಗಿಸ್, ಎಪ್ರಿಲ್ ಫೂಲ್ ನ ದಿನಗಳು ಇನ್ನೂ ಸರಿಯಾಗಿ ಕಳೆದಿಲ್ಲ. ಇದರೆಡೆಯಲ್ಲೇ ನಾನು 12 ಮಿಲಿಯನ್ ದಿರ್ಹಮ್ ಲಾಟರಿ ಗೆದ್ದಿದ್ದೇನೆಂದು ಕಾಲ್ ಬಂದಾಗ ನಾನು ನಿಜಕ್ಕೂ ನಂಬಲಿಲ್ಲ. ಅದು ಫೇಕ್ ಕರೆಯಾಗಿರಬೇಕು ಎಂದೇ ಭಾವವಿಸಿದ್ದೆ. ಇದು ನಿಜವೆಂದು ಗೊತ್ತಾದ ಮೇಲೂ ನಾನು ಮನೆಗೆ ಕಾಲ್ ಮಾಡಿ ವಿಷಯ ತಿಳಿಸಲು ಸ್ವಲ್ಪ ಸಮಯ ತೆಗೆದುಕೊಂಡೆ. ನನಗೆ ಜಿಕ್ಕೂ ತುಂಬಾನೇ ಸಂತೋಷವಾಗಿದೆ. ಈ ಮೊತ್ತವನ್ನು ನನ್ನ ಸ್ನೇಹಿತರೆಡೆಯಲ್ಲೂ ಹಂಚುತ್ತೇನೆ. ಎಲ್ಲದಕಿಂತ ಮೊದಲು ಹೊಸ ಸ್ಮಾರ್ಟ್ ಫೋನ್ ಒಂದನ್ನು ಖರೀದಿಸಬೇಕು ಎಂದು ಅವರು ಹೇಳಿದರು.