ಪ್ರಧಾನಿ ನರೇಂದ್ರ ಮೋದಿ ಓರ್ವ ಆಧುನಿಕ ಹಿಟ್ಲರ್: ಕೇರಳ ಕಾಂಗ್ರೆಸ್ ಮುಖಂಡ

ನ್ಯೂಸ್      ಕನ್ನಡ ವರದಿ-(20.04.18): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆಡಳಿತದ ಅಡಿಯಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳು ಹಾಗೂ ಜನ ವಿರೋಧಿ ನೀತಿಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಕೇರಳ ಕಾಂಗ್ರೆಸ್ ನ ಮುಖಂಡ ಕೆ.ವಿ ಥಾಮಸ್, ಪ್ರಧಾನಿ ನರೇಂದ್ರ ಮೊದಿ ಓರ್ವ ಆಧುನಿಕ ಹಿಟ್ಲರ್ ಎಂದು ಸಂಭೋಧಿಸಿದ್ದಾರೆ. ಪ್ರಧಾನಿಯನ್ನು ನರಹಂತಕ ಅಡಾಲ್ಫ್ ಹಿಟ್ಲರ್ ಗೆ ಹೋಲಿಸಿ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.

ಕೇರಳ ಕಾಂಗ್ರೆಸ್ ಮುಖಂಡರಾದ ಎಂಎಂ ಹಸನ್ ಎಂಬವರು ಜನಮೋಜನ(ಜನರ ವಿಮೋಚನೆ) ಯಾತ್ರೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಥಾಮಸ್, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಆಜ್ಯದಲ್ಲಿ ಪಿಣರಾಯಿ ವಿಜಯನ್, ಇಬ್ಬರೂ ಜನವಿರೋಧಿ ಆಡಳಿತವನ್ನು ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಓರ್ವ ಆಧುನಿಕ ಹಿಟ್ಲರ್. ಇನ್ನು ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನಿಡಿದ್ದ ಶ್ರೀಜಿತ್ ರವರ ಪುತ್ರಿಯ ವಿದ್ಯಾಭ್ಯಾಸಕ್ಕಾಗಿ 2.5ಲಕ್ಷ ರೂ. ನೀಡುವುದಾಗಿಯೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *