ಲಂಡನ್ ನಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಬೆಂಕಿ: ಕ್ಷಮೆಯಾಚಿಸಿದ ಬ್ರಿಟಿಷ್ ಸರಕಾರ!

ನ್ಯೂಸ್ ಕನ್ನಡ ವರದಿ-(20.04.18): ದೇಶದಲ್ಲಿ ಹಲವಾರು ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ವಿದೇಶ ಯಾತ್ರೆ ಕೈಗೊಂಡಿದ್ದರು. ಪ್ರಧಾನಿ ಲಂಡನ್ ಗೆ ಆಗಮಿಸಿದ ಸಂದರ್ಭದಲ್ಲಿ ಲಂಡನ್ ನ ಅನಿವಾಸಿ ಭಾರತೀಯರು ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಹಲವಾರು ಘೋಷಣೆಗಳು, ಪ್ಲೇಕಾರ್ಡ್ ಗಳು ಕಂಡುಬಂದಿತ್ತು. ಇದು ಮಾತ್ರವಲ್ಲದೇ ಭಾರತದ ತ್ರಿವರ್ಣಧ್ವಜಕ್ಕೆ ಬೆಂಕಿ ಹಚ್ಚಿದಂತಹ ಗಂಭೀರ ಪ್ರಕರಣವೊಂದು ನಡೆದಿದ್ದು, ಇದೀಗ ಈ ಕುರಿತು ಬ್ರಿಟೀಷ್ ಸರಕಾರ ಕ್ಷಮೆ ಯಾಚಿಸಿದೆ ಎಂದು ತಿಳಿದು ಬಂದಿದೆ.

ಭಾರತೀಯ ತ್ರಿವರ್ಣ ಧ್ವಜಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಕುರಿತಾದಂತೆ ಹೇಳಿಕೆ ನೀಡಿರುವ ಲಂಡನ್ ವಿದೇಶಾಂಗ ಕಚೇರಿ ಮತ್ತು ಕಾಮನ್ ವೆಲ್ತ್ ಕಚೇರಿ, ಜನರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕಿದೆ. ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿದ್ದ ಕೆಲ ಸದಸ್ಯರ ನಡವಳಿಕೆಯಿಂದ ಬೇಸರವಾಗಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಭಾರತೀಯ ರಾಯಭಾರಿ ಯಶ್’ವರ್ಧನ್ ಕುಮಾರ್ ಸಿನ್ಹಾ ಅವರೊಂದಿಗೆ ಮಾತುಕತೆ ನಡೆಸಲಾಯಿತು ಎಂದು ಹೇಳಿಕೊಂಡಿದೆ. ಇದರಂತೆ ವೆಬ್ ಪೋರ್ಟಲ್ ಕೂಡ ಘಟನೆ ಕುರಿತಂತೆ ವರದಿ ಮಾಡಿದ್ದು, ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಮತ್ತೆ ಭಾರತದ ತ್ರಿವರ್ಣ ಧ್ವಜ ಹಾರಿಸಲು ಬ್ರಿಟೀಷ್ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *