ನಗದು ಕೊರತೆಗೆ ಆಕ್ರೋಶ: ಎಟಿಎಂ ಯಂತ್ರದ ಅಂತ್ಯಕ್ರಿಯೆ ನಡೆಸಿದ ಗ್ರಾಮಸ್ಥರು!
ನ್ಯೂಸ್ ಕನ್ನಡ ವರದಿ(20-04-2018): ದೇಶಾದ್ಯಂತ ಎಟಿಎಂ ಗಳು ನಗದು ಕೊರತೆಯನ್ನು ಎದುರಿಸುತ್ತಿದ್ದು, ಇದರಿಂದ ಬೇಸತ್ತ ಕಲಬುರ್ಗಿಯ ಜನತೆ ಎಟಿಎಂ ಯಂತ್ರದ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ವಿನೂತನ ಪ್ರತಿಭಟನೆಯನ್ನು ಮಾಡಿದರು.
ಕಲಬುರ್ಗಿಯ ಅಹಿಂದ ಚಿಂತಕರ ವೇದಿಕೆಯ ಕಾರ್ಯಕರ್ತರು ಎಟಿಎಂ ನಲ್ಲಿ ನಗದು ಕೊರತೆಯ ಕಾರಣ ಪ್ರತಿಭಟನೆ ನಡೆಸಿ, ದೇಶದ ಅತೀ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಎಸ್ ಬಿಐ ಎಟಿಎಂ ಕೇಂದ್ರದ ಮುಂದೆ ಎಟಿಎಂ ಅಂತ್ಯಕ್ರಿಯೆ ನಡೆಸಿ ತಿಥಿ ಊಟ ನೀಡುವ ಕಾರ್ಯಕ್ರಮ ಹಮ್ಮಿಕೊಂಡರು. ರಸ್ತೆಯಲ್ಲಿ ಎಟಿಎಂ ತಿಥಿ ಊಟವನ್ನು ಸಿದ್ಧಪಡಿಸಿ ಸೇವಿಸಿದರು.
ಎಟಿಎಂ ಮಾದರಿಯನ್ನು ತಯಾರಿಸಿ ಅದಕ್ಕೆ ಹೂಮಾಲೆಯನ್ನು ಹಾಕಿ ಎಟಿಎಂ ಯಂತ್ರದ ಶವಯಾತ್ರೆಯನ್ನು ಮಾಡಿ ಪ್ರತಿಭಟನೆ ನಡೆಸಿದರು.