ಶೋಭಾ ಕರಂದ್ಲಾಜೆ ನಿವಾಸದ ಮೇಲೆ ಐಟಿ ದಾಳಿ ನಡೆಸಿದರೆ ಕೋಟಿಗಟ್ಟಲೆ ಹಣ ಸಿಗುತ್ತದೆ: ಬೇಳೂರು ಗೋಪಾಲಕೃಷ್ಣ ಬಾಂಬ್!
ನ್ಯೂಸ್ ಕನ್ನಡ ವರದಿ(20-04-2018): ಸಂಸದೆ ಶೋಭಾ ಕರಂದ್ಲಾಜೆ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರೆ ಅವರ ನಿವಾಸದಲ್ಲಿ ಕೋಟಿಗಟ್ಟಲೆ ರೂಪಾಯಿ ಹಣ ಸಿಗುತ್ತದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿಯ ಬಂಡಾಯ ನಾಯಕ ಬೇಳೂರು ಗೋಪಾಲ ಕೃಷ್ಣ ಹೊಸ ಬಾಂಬ್ ಹಾಕಿದ್ದಾರೆ.
ಕೆಜೆಪಿಯಿಂದ ಬಿಜೆಪಿಗೆ ಬಂದವರಿಗೆಲ್ಲಾ ಬಿಜೆಪಿ ಟಿಕೆಟ್ ನೀಡಲಾಗಿದೆ. ನಾನು ಯಡಿಯೂರಪ್ಪ ಜೊತೆ ಕೆಜೆಪಿಗೆ ಹೋಗದ ಕಾರಣ ಇಂದು ನನಗೆ ಟಿಕೆಟ್ ಸಿಗಲಿಲ್ಲ. ನನಗೆ ಟಿಕೆಟ್ ಕೈತಪ್ಪಲು ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಕಾರಣ ಎಂದು ನೇರ ಆರೋಪ ಮಾಡಿದರು.
ಹಾಲಪ್ಪ ಬಿಜೆಪಿ ಬಿಟ್ಟು ಮೂರು ದಿನ ಅಡಗಿ ಕುಳಿತಿದ್ದ. ಆತನನ್ನು ಇದೇ ಶೋಭಾ ಹಾಗೂ ಭಾರತೀ ಶೆಟ್ಟಿ ವಾಪಾಸ್ ಕರೆ ತಂದಿದ್ದಾರೆ.ನನ್ನನ್ನು ಜೆಡಿಎಸ್ ಪಕ್ಷಕ್ಕೆ ಕರೆದಿದ್ದಾರೆ ಆದರೆ ನಾನು ಹೋಗಲ್ಲ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ತನ್ನ ಸಾಮರ್ಥ್ಯವನ್ನು ಯಡಿಯೂರಪ್ಪನಿಗೆ ತೋರಿಸುತ್ತೇನೆ ಎಂದು ಚಾಲೇಂಜ್ ಹಾಕಿದರು.