‘ಸರ್ಜಿಕಲ್ ಸ್ಟ್ರೈಕ್’ ಎಂಬ ಸುಳ್ಳನ್ನು ಮೋದಿ ನೂರು ಬಾರಿ ಹೇಳಿದರೆ ಅದು ಸತ್ಯವಾಗುವುದಿಲ್ಲ: ಪಾಕಿಸ್ತಾನ!
ನ್ಯೂಸ್ ಕನ್ನಡ ವರದಿ(20-04-2018): ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸರ್ಜಿಕಲ್ ಸ್ಟ್ರೈಕ್ ಎಂಬ ಸುಳ್ಳನ್ನು 2016ರಿಂದಲೂ ಪದೇ ಪದೇ ಹೇಳುತ್ತಾ ಬಂದಿದ್ದಾರೆ. ಒಂದು ಸುಳ್ಳನ್ನು ನೂರು ಬಾರಿ ಹೇಳುವ ಮೂಲಕ ಸತ್ಯವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದಾರೆ.
ಲಂಡನ್ ನಲ್ಲಿ ‘ಭಾರತ್ ಕಿ ಬಾತ್ ಸಬ್ ಕಾ ಸಾಥ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಧಾನಿ ಮೋದಿಯವರು ‘ನಾವು ಸರ್ಜಿಕಲ್ ಸ್ಟ್ರೈಕ್ ನಡೆಸಿದಂದು ರಾತ್ರಿ 11ರ ಸುಮಾರಿಗೆ ಪಾಕಿಸ್ತಾನದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ್ದೆವು. ಅವರು ಭಯದಿಂದ ಕರೆ ಸ್ವೀಕರಿಸಲಿಲ್ಲ. ರಾತ್ರಿ 12ಕ್ಕೆ ಕಾರ್ಯಾಚರಣೆಯ ಮಾಹಿತಿ ಅವರಿಗೆ ನೀಡಿದೆವು. ಅದರ ನಂತರವೇ ಭಾರತೀಯ ಮಾಧ್ಯಮಗಳಿಗೆ ತಿಳಿಸಿದ್ದೆವು’ ಎಂದು ಮೋದಿ ಹೇಳಿದ್ದರು. ಈ ಕುರಿತ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಅಧಿಕಾರಿಗಳು ಈ ಮಾತನ್ನು ಹೇಳಿದ್ದಾರೆ.
ಮೋದಿ ಹೇಳಿದ ಸರ್ಜಿಕಲ್ ಸ್ಟ್ರೈಕ್ ಕುರಿತ ಮಾತುಗಳು ಆಧಾರ ರಹಿತ ಹಾಗೂ ಅಪ್ಪಟ ಸುಳ್ಳು ಎಂದು ಪಾಕಿಸ್ತಾನ ತಿಳಿಸಿದೆ