ಉಡುಪಿ: ತವರಿಗೆ ಆಗಮಿಸಿದ ಕಾಮನ್ ವೆಲ್ತ್ ಪದಕ ವಿಜೇತ ಗುರುರಾಜ್ ಗೆ ಭವ್ಯ ಸ್ವಾಗತ!
ನ್ಯೂಸ್ ಕನ್ನಡ ವರದಿ-(20.04.18)ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿರುವ ಉಡುಪಿಯ ಕುಂದಾಪುರದ ಗುರುರಾಜ್ ಪೂಜಾರಿಯವರು ತವರಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಅವರಿಗೆ ಭವ್ಯ ಸ್ವಾಗತ ಕೋರಿದರು. ಒಲಿಂಪಿಕ್ಸ್ ಪದಕ ನನ್ನ ಗುರಿ ಎಂದು ಗುರುರಾಜ್ ಹೇಳಿದ್ದಾರೆ. ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಹುಟ್ಟೂರಿಗೆ ಬಂದ ಸಂದರ್ಭ ಭವ್ಯ ಸ್ವಾಗತ ದೊರೆತಿದೆ. ಇತರ ಕ್ರೀಡಾಪಟುಗಳಿಗೂ ಇದೇ ಮಾದರಿಯ ಪ್ರೋತ್ಸಾಹ ದೊರೆಯಲಿ. ಆಗ ಮಾತ್ರ ಹಳ್ಳಿಯ ಕ್ರೀಡಾಪಟುಗಳು ಕೂಡ ಸಾಧನೆ ಮಾಡಲು ಸಾಧ್ಯ ಎಂದರು. 2015ರಿಂದ ಪಂಜಾಬ್ನ ಪಟಿಯಾಲಾದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ 2 ತಾಸು, ಸಂಜೆ 3 ತಾಸು ನಿರಂತರ ಅಭ್ಯಾಸ ಮಾಡುತ್ತಿದ್ದೇನೆ. ಸೆಪ್ಟಂಬರ್ನಲ್ಲಿ ನಡೆಯುವ ಏಷ್ಯನ್ ಗೇಮ್ಸ್ಗೆ ಸಿದ್ಧನಾಗುತ್ತಿದ್ದೇನೆ. ಮುಂದಿನ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಗುರಿ ಇದೆ. ಕಾಮನ್ವೆಲ್ತ್ನಲ್ಲಿ ಎತ್ತಿರುವ ಭಾರಕ್ಕಿಂತ 20ರಿಂದ 30 ಕೆಜಿ ಜಾಸ್ತಿ ಎತ್ತಿದರೆ ಒಲಿಂಪಿಕ್ಸ್ ಪದಕ ಗೆಲ್ಲಬಹುದಾಗಿದೆ ಎಂದರು.