ಬಂಟ್ವಾಳದಿಂದ ನಾಮಪತ್ರ ಸಲ್ಲಿಸಿದ ಸಚಿವ ರಮಾನಾಥ ರೈ: ಒಟ್ಟು ಆಸ್ತಿ ಎಷ್ಟು ಗೊತ್ತೇ?!
ನ್ಯೂಸ್ ಕನ್ನಡ ವರದಿ(20-04-2018): ದಕ್ಷಿಣ ಕನ್ನಡ ಜಿಲ್ಲೆಯ ಬಹಳ ಜಿದ್ದಾಜಿದ್ದಿನ ಸ್ಪರ್ಧೆಯ ಚುನಾವಣಾ ಕೇಂದ್ರವಾದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ಅರಣ್ಯ ಸಚಿವ ರಮಾನಾಥ ರೈ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತನ್ನ ನಾಮಪತ್ರವನ್ನು ಸಲ್ಲಿಸಿದರು.
ರಮಾನಾಥ ರೈ ನಾಮಪತ್ರದ ಜೊತೆಗೆ ತನ್ನ ಆಸ್ತಿ ವಿವರವನ್ನೂ ಕೂಡ ಸಲ್ಲಿಸಿದ್ದು, ಅವರ ಆಸ್ತಿ ಬಹಳಷ್ಟು ಏರಿಕೆ ಕಂಡಿದೆ. ರೈ ಕುಟುಂಬಧ ನಗದು ಚಿನ್ನ ಕಾರು ಸೇರಿದಂತೆ ಒಟ್ಟು ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ವಿವರ ಹೀಗಿದೆ.
ಸಚಿವ ರೈ ಹೆಸರಿನಲ್ಲಿ 53,87,421 ರೂಪಾಯಿ ಮೌಲ್ಯದ ಚರಾಸ್ತಿಯಿದ್ದರೆ , 3,96,40,000 ರೂಪಾಯಿಗಳ ಸ್ಥಿರಾಸ್ತಿಯಿದೆ. ರಮಾನಾಥ ರೈ ಪತ್ನಿ ಧನಭಾಗ್ಯ 86, 63,326 ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 1.2 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯ ಒಡತಿಯಾಗಿದ್ದಾರೆ. ರಮಾನಾಥ ರೈ ಪುತ್ರಿ ಚರಿಷ್ಮಾ ರೈ 34,17,708 ರೂ. ಮೌಲ್ಯದ ಚರಾಸ್ತಿ ಹೊಂದಿದ್ದು, 21 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿಯಿದೆ. ರೈ ಚೈತ್ರದೀಪ್ ರೈ 21, 82,102 ರೂ. ರೈ ಪುತ್ರ ಚೈತ್ರದೀಪ್ 21, 82,102 ರೂ.ಮೌಲ್ಯದ ಚರಾಸ್ತಿ ಹೊಂದಿದ್ದರೆ, ಯಾವುದೇ ಸ್ಥಿರಾಸ್ಥಿಯಿಲ್ಲವೆಂದು ದಾಖಲೆಯಲ್ಲಿ ತಿಳಿಸಲಾಗಿದೆ