ಆಸಿಫಾ ರೇಪ್ ಆ್ಯಂಡ್ ಮರ್ಡರ್ ಕುರಿತು ಮಾತನಾಡಲೂ ನನಗೆ ಭಯವಾಗುತ್ತಿದೆ: ಅಮಿತಾಬ್ ಬಚ್ಚನ್!

ನ್ಯೂಸ್ ಕನ್ನಡ ವರದಿ(20-04-2018): ಜಮ್ಮುವಿನ ಕಥುವಾದಲ್ಲಿ ನಡೆದ 8ರ ಹರೆಯದ ಬಾಲಕಿಯ ರೇಪ್ ಅ್ಯಂಡ್ ಮರ್ಡರ್ ಪ್ರಕರಣವು ಬಹಳ ಭಯಾನಕವಾಗಿದ್ದು, ಆ ಕುರಿತು ಮಾತನಾಡಲೂ ಕೂಡ ನನಗೆ ಭಯವಾಗುತ್ತಿದೆ ಎಂದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

ತಾನು ನಟಿಸಿದ102 ನಾಟ್ ಔಟ್ ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಕಥುವಾ ಅತ್ಯಾಚಾರದ ಕುರಿತು ಹೆಚ್ಚು ಮಾತನಾಡಲು ನಾನು ಇಚ್ಚಿಸುವುದಿಲ್ಲ. ಅದು ನನಗೆ ನೋವಿನ ಜೊತೆಗೆ ಬಹಳಷ್ಟು ಭಯ ಹಾಗೂ ಅಸಹ್ಯವನ್ನುಂಟು ಮಾಡುತ್ತದೆ ಎಂದು ಅವರು ಹೇಳಿದರು.

ಕೆಲವು ತಿಂಗಳ ಹಿಂದೆ ಜಮ್ಮುವಿನ ಕಥುವಾದಲ್ಲಿ ದುಷ್ಕರ್ಮಿಗಳ ಗುಂಪೊಂದು 8ರ ಹರೆಯದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದು ನಂತರ ಆಕೆಯನ್ನು ಹತ್ಯೆಗೈದಿತ್ತು. ಈ ಪ್ರಕರಣ ವರದಿಯಾಗುತ್ತಿದಂತೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದವು.

Leave a Reply

Your email address will not be published. Required fields are marked *