ಪಾಕಿಸ್ತಾನದಿಂದ ಭಾರತಕ್ಕೆ ಮರಳಿ ಬಂದ ಗೀತಾಗೆ ಮದುವೆ ಪ್ರಪೋಸಲ್ ಗಳ ಸುರಿಮಳೆ!
ನ್ಯೂಸ್ ಕನ್ನಡ ವರದಿ(20-04-2018): ತಾನು ಏಳು ವರ್ಷದ ಬಾಲಕಿಯಾಗಿದ್ದಾಗ ಅಕಸ್ಮಿಕವಾಗಿ ಸಂಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಪಾಕಿಸ್ತಾನದ ಲಾಹೋರ್ ಗೆ ತೆರಳಿ, ಬಳಿಕ ಪಾಕಿಸ್ತಾನ ಮೂಲದ ಈಧಿ ಪೌಂಡೇಶನ್ ಪ್ರಯತ್ನದ ಫಲವಾಗಿ 2015ರಲ್ಲಿ ಭಾರತಕ್ಕೆ ಮರಳಿದ ಗೀತಾಗೆ ಮದುವೆ ಪ್ರಪೋಸಲ್ ಗಳ ಸುರಿಮಳೆಯೇ ಹರಿದು ಬರುತ್ತಿದೆಯಂತೆ.
ಹುಟ್ಟು ಮೂಗಿ ಹಾಗೂ ಕಿವುಡಿಯಾಗಿದ್ದ ಗೀತಾ ಅಕಸ್ಮಿಕವಾಗಿ ಸಂಜೋತಾ ಎಕ್ಸ್ ಪ್ರೆಸ್ ರೈಲು ಹತ್ತುವ ಮೂಲಕ ಪಾಕಿಸ್ತಾನಕ್ಕೆ ತೆರಲಿದ್ದಳು. ನಂತರ ಈಧಿ ಪೌಂಡೇಶನ್ ಗೀತಾಳಿಗೆ ಆಶ್ಯ ನೀಡಿತ್ತು. 2015ರಲ್ಲಿ ಭಾರತಕ್ಕೆ ಮರಳಿದ ಗೀತಾಳನ್ನು ಖುದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬರಮಾಡಿಕೊಂಡಿದ್ದರು.
ಇದೀಗ ಗೀತಾಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಾಮಾಜಿಕ ಕಾರ್ಯಕರ್ತ ಜ್ಞಾನೇಂದ್ರ ಪುರೋಹಿತ್ ಗೀತಾಳ ಮದುವೆಗೆ ಮುಂದಾಗಿದ್ದು, ಒಂದು ವಾರದ ಹಿಂದೆ ಈ ಕುರಿತು ಗೀತಾಳ ಫೋಟೋವನ್ನು ಫೇಸ್ ಬುಕ್ ನಲ್ಲಿ ಫೋಸ್ಚ್ ಮಾಡಿ ಗೀತಾಳನ್ನು ಮದುವೆಯಾಗಲಿಚ್ಚಿಸುವ ವರರ ಬಯೋಡಾಟ ಕೇಳಿದ್ದರು. ಇದಕ್ಕೆ ಸ್ಪಂಧಿಸಿದ ಸುಮಾರು 20ಕ್ಕೂ ಅಧಿಕ ಮಂದಿ ಯುವಕರು ಗೀತಾಳನ್ನು ಮದುವೆಯಾಗಲು ಮುಂದೆ ಬಂದಿದ್ದಾರೆ ಎಂದು ಪುರೋಹಿತ್ ತಿಳಿಸಿದ್ದಾರೆ.