ಸೌದಿ ಅರೇಬಿಯಾ: ಪೋಲೀಸ್ ಚೆಕ್ ಪೋಸ್ಟ್ ಮೇಲೆ ದುಷ್ಕರ್ಮಿಗಳ ಗುಂಡಿನ ದಾಳಿ: ನಾಲ್ವರು ಪೋಲೀಸ್ ಅಧಿಕಾರಿಗಳ ಮೃತ್ಯು!
ನ್ಯೂಸ್ ಕನ್ನಡ ವರದಿ(20-04-2018): ದಕ್ಷಿಣ ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದಲ್ಲಿರುವ ಪೋಲಿಸ್ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತರಾದ ಪೋಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ನಾಲ್ವರು ಪೋಲೀಸ್ ಅಧಿಕಾರಿಗಳನ್ನ ಹತ್ಯೆ ಮಾಡಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೌದಿ ಆಂತರಿಕ ಸಚಿವಾಲಯ ಹೇಳಿದೆ.
ದಾಳಿ ನಡೆಸಿದ ತಕ್ಷಣ ದುಷ್ಕರ್ಮಿಗಳನ್ನು ಬೆನ್ನಟ್ಟಿದ ಪೋಲೀಸರು ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದು, ಮೂರನೇ ದುಷ್ಕರ್ಮಿ ಪೋಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಎಲ್ಲಾ ಮೂವರು ದುಷ್ಕರ್ಮಿಗಳು ಸೌದಿ ಪ್ರಜೆಗಳಾಗಿದ್ದಾರೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.