ಪ್ರಧಾನಿ ಮೋದಿ ಮಹಿಳೆಯರ ಕುರಿತು ಹೆಚ್ಚು ಕಾಳಜಿ ವಹಿಸಬೇಕಾಗಿದೆ: ಐಎಂಎಫ್ ಮುಖ್ಯಸ್ಥೆ!
ನ್ಯೂಸ್ ಕನ್ನಡ ವರದಿ(20/04-2018): ಜಮ್ಮುವಿನ ಕಥುವಾ ಹಾಗೂ ಉತ್ತರ ಪ್ರದೇಶದ ಉನ್ನೋವ್ ಪ್ರಕರಣಗಳ ಕುರಿತು ತನ್ನ ದಿಗ್ಭ್ರಮೆ ವ್ಯಕ್ತಪಡಿಸಿದ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಿಯನ್ ಲಗಾರ್ಡೆ, ಭಾರತದ ಪ್ರಧಾನಿ ಮೋದಿಯವರು ಮಹಿಳೆಯರ ಕುರಿತು ಹೆಚ್ಚು ಕಾಳಜಿ ವಹಿಸಬೇಕಿದೆ ಎಂದಿದ್ದಾರೆ.
ಭಾರತದಲ್ಲಿ ಅಲ್ಲಲ್ಲಿ ದಂಗೆ ಪ್ರತಿಭಟನೆಗಳು ನಡೆಯುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಭಾರತದ ಅಧಿಕಾರಿಗಳು ಈ ಕುರಿತು ಹೆಚ್ಚಿನ ನಿಗಾ ವಹಿಸಬೇಕಾಗಿದೆ ಏಕೆಂದರೆ ಭಾರತದ ಮಹಿಳೆಯರಿಗೆ ಇದು ಅಗತ್ಯವಾಗಿದೆ ಎಂದರು. ನಾನು ದಾವೋಸ್ ನಲ್ಲಿ ಮೋದಿಯವರೊಂದಿಗೆ ಈ ಕುರಿತು ಹೇಳಿದ್ದೇನೆ ಎಂದೂ ಕ್ರಿಸ್ಟಿಯನ್ ಲಗಾರ್ಡೆ ಹೇಳಿದರು.
ಇದು ಐಎಂಎಫ್ ನ ಅಭಿಪ್ರಾಯವಾಗಿರದೆ ನನ್ನದೇ ಸ್ವಂತ ಹೇಳಿಕೆಯಾಗಿದೆ. ಓರ್ವ ಮಹಿಳೆಯಾಗಿ ಇಂತಹ ನೀಚ ಕೃತ್ಯದ ಕುರಿತುಮಾತನಾಡುವುದು ನನ್ನ ಕರ್ತವ್ಯವಾಗಿದೆ ಎಂದು ಲಗಾರ್ಡೆ ಹೇಳಿದರು.