ಮಹಿಳಾ ದೌರ್ಜನ್ಯ ಪ್ರಕರಣ ಹೊಂದಿರುವ 48 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ ಬಿಜೆಪಿ!

ನ್ಯೂಸ್ ಕನ್ನಡ ವರದಿ-(20.04.18): ನವದೆಹಲಿ: ದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಬಗ್ಗೆ ಚರ್ಚೆ, ವಾಕ್ಸಮರಗಳು ನಡೆದುಬರುತ್ತಿರುವ ಈ ಹೊತ್ತಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿರುವ 48 ಜನಪ್ರತಿನಿಧಿಗಳು ಸರ್ಕಾರದಲ್ಲಿದ್ದಾರೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರೈಟ್ಸ್ ವರದಿಯಲ್ಲಿ ಹೇಳಲಾಗಿದೆ.

ಪ್ರಸ್ತುತ ವರದಿ ಪ್ರಕಾರ 45 ಶಾಸಕರು ಮತ್ತು ಮೂವರು ಸಂಸದರು ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚುನಾವಣೆಗೆ ಟಿಕೆಟ್ ಸಿಕ್ಕಿದ 327 ರಾಜಕಾರಣಿಗಳು ಹಾಗೂ 118 ಸ್ವತಂತ್ರ ಅಭ್ಯರ್ಥಿಗಳು ಇಂಥಾ ಪ್ರಕರಣಗಳಲ್ಲಿ ಭಾಗಿಯಾಗಿದ್ದವರಾಗಿದ್ದಾರೆ.

ಈ ಅಭ್ಯರ್ಥಿಗಳ ಪೈಕಿ 40 ಅಭ್ಯರ್ಥಿಗಳಿಗೆ ಲೋಕಸಭೆ/ರಾಜ್ಯಸಭೆ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿರುವ 287 ಅಭ್ಯರ್ಥಿಗಳಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸ್ವತಂತ್ರ ಅಭ್ಯರ್ಥಿಗಳಲ್ಲಿ ಇಂಥಾ ಪ್ರಕರಣದಲ್ಲಿ ಭಾಗಿಯಾದವರ ಸಂಖ್ಯೆ ಕಡಿಮೆ ಇದೆ. ಕಳೆದ 5 ವರ್ಷಗಳಲ್ಲಿ, ಈ ರೀತಿಯ ಪ್ರಕರಣಗಳಲ್ಲಿ ಹೆಸರಿರುವ 18 ಸ್ವತಂತ್ರ ಅಭ್ಯರ್ಥಿಗಳು ಲೋಕಸಭಾ/ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅದೇ ವೇಳೆ ವಿಧಾನಸಭಾ ಚುನಾವಣೆಗಳಲ್ಲಿ 100 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ 12 ಜನಪ್ರತಿನಿಧಿಗಳು ಮಹಾರಾಷ್ಟ್ರದಲ್ಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 11 ಸಂಸದರು/ ಶಾಸಕರು, ಒಡಿಶಾ ಮತ್ತು ಆಂಧ್ರ ಪ್ರದೇಶದಲ್ಲಿ ತಲಾ 5 ಜನಪ್ರತಿನಿಧಿಗಳ ವಿರುದ್ಧ ಇಂಥಾ ಪ್ರಕರಣಗಳಿವೆ.

ರಾಜಕೀಯ ಪಕ್ಷಗಳು ಟಿಕೆಟ್ ನೀಡಿರುವ ಅಭ್ಯರ್ಥಿಗಳ ಸಂಖ್ಯೆ ಗಮನಿಸಿದರೆ ಮಹಾರಾಷ್ಟ್ರದಲ್ಲಿ 65, ಬಿಹಾರದಲ್ಲಿ 62 ಮತ್ತು 52 ರಾಜಕಾರಣಿಗಳಿಗೆ ಟಿಕೆಟ್ ನೀಡಲಾಗಿದೆ. ರಾಜಕೀಯ ಪಕ್ಷಗಳ ಪೈಕಿ ಬಿಜೆಪಿಯಲ್ಲಿಯೇ ಅತೀ ಹೆಚ್ಚು ಆರೋಪಿ ರಾಜಕಾರಣಿಗಳಿದ್ದಾರೆ. ಬಿಜೆಪಿಯಲ್ಲಿ ಸಂಸದ/ಶಾಸಕ- 12, ಶಿವಸೇನೆ- 7, ತೃಣಮೂಲ ಕಾಂಗ್ರೆಸ್ -6 ಜನಪ್ರತಿನಿಧಿಗಳಿದ್ದಾರೆ.

ವಿವಿಧ ಚುನಾವಣೆಗಳು ಬಂದಾಗ ಇಂಥಾ ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಟಿಕೆಟ್ ನೀಡಿದ ರಾಜಕೀಯ ಪಕ್ಷಗಳಲ್ಲಿ ಬಿಜೆಪಿ 47 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ, ಇನ್ನುಳಿದಂತೆ ಬಿಎಸ್‍ಪಿ-35 ಮತ್ತು ಕಾಂಗ್ರೆಸ್ 24 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.
cts: prajavani

Leave a Reply

Your email address will not be published. Required fields are marked *