ಸಾಲಿನಲ್ಲಿ ಕಾದುನಿಂತು ಪೆಟ್ರೋಲ್ ಹಾಕ್ಸಿ ಜಾಲಿ ರೈಡ್ ಮಾಡಿದ ಕನ್ನಡದ ಸೂಪರ್’ಸ್ಟಾರ್ ಯಾರು ಗೊತ್ತೇ?
ಸ್ಟೈಲ್ಗೆ ಮತ್ತೊಂದು ಹೆಸರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎನ್ನಬಹುದು. ಅಂದ ಹಾಗೇ ಸುದೀಪ್ ಅವರ ಬಳಿ ಹಲವು ಐಷಾರಾಮಿ ವಾಹನಗಳಿವೆ. ಅದೇ ರೀತಿ ಸುದೀಪ್ ಅವ್ರ ಬಳಿ ಇರುವ ವಾಹನಗಳೂ ಕೂಡ ಒಂದು ರೀತಿಯಲ್ಲಿ ಸ್ಟೈಲ್ ಹೊಂದಿರುತ್ತವೆ ಎಂಬುದನ್ನು ನಾಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ ಬಿ.ಎಂ.ಡಬ್ಲ್ಯೂ. ಆರ್ 1200 ಬೈಕ್.
ಹೌದು, ಐಷಾರಾಮಿ ಕಾರುಗಳೊಂದಿಗೆ ಸೂಪರ್ ಬೈಕ್ಗಳನ್ನೂ ಹೊಂದಿರುವ ಕಿಚ್ಚ ಬಿಡುವಿನ ವೇಳೆಯಲ್ಲಿ ಗೆಳೆಯರ ತಂಡದೊಂದಿಗೆ ಜಾಲಿ ರೈಡ್ ಹೋಗ್ತಾರೆ. ಅದೇ ರೀತಿ, ಸಮಯ ಸಿಕ್ಕಾಗಲೆಲ್ಲ ಅವುಗಳನ್ನು ಏರಿ ಊರು, ನಗರ ಸುತ್ತೋದು ಅವರ ಹವ್ಯಾಸ. ಅದೇ ರೀತಿ ಮಂಗಳವಾರ ಯಾರಿಗೂ ಗೊತ್ತಿಲ್ಲದಂತೆ ತಮ್ಮ ಬಿ.ಎಂ.ಡಬ್ಲ್ಯೂ. ಆರ್ 1200 ಬೈಕ್ ಏರಿ ಬೆಂಗಳೂರು ಸುತ್ತಿದ್ದಾರೆ ಸುದೀಪ್.
ಮುಖ ಕಾಣದಂತೆ ಹೆಲ್ಮೆಟ್ ಧರಿಸಿ, ಕಪು್ಪ ವರ್ಣದ ಜಾಕೆಟ್ ಹಾಕಿಕೊಂಡು ಕನಕಪುರ ರಸ್ತೆಯಲ್ಲಿರುವ ನಟ ಚಂದನ್ ಮನೆಗೆ ಸುದೀಪ್ ಬೈಕ್ ಓಡಿಸಿಕೊಂಡು ಹೋಗುವ ಮೂಲಕ ಬೆಂಗಳೂರಿನ ರಾತ್ರಿ ಸಮಯವನ್ನು ಆಸ್ವಾದಿಸಿದ್ದಾರೆ. ಇದರ ಮದ್ಯೆ ಪೆಟ್ರೋಲ್ ಬಂಕ್ಗೂ ಹೋಗಿ ಸಾಮಾನ್ಯನಂತೆ ಸರತಿ ಸಾಲಲ್ಲಿ ಬಂದು ಪೆಟ್ರೋಲ್ ಸಹ ಹಾಕಿಸಿಕೊಂಡಿದ್ದಾರೆ. ಆದರೆ ಯಾರೂ ಅವರನ್ನು ಗುರುತಿಸಿಲ್ಲ.
ಕಿಚ್ಚ ರಾತ್ರಿ ವೇಳೆ ಬೈಕ್ ನಲ್ಲಿ ಸುತ್ತಾಡಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿದೆ. ಕಿಚ್ಚನ ಅಭಿಮಾನಿಗಳ ಸಂಭ್ರಮ ಹೇಳತೀರದಾಗಿದೆ. ಇನ್ನು, ಸಿನಿಮಾ ವಿಚಾರಕ್ಕೆ ಬಂದರೆ, ಗುರುದತ್ ಗಾಣಿಗ ನಿರ್ದೇಶನದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಶೂಟಿಂಗ್ನಲ್ಲಿ ಸುದೀಪ್ ಬಿಜಿಯಾಗಿದ್ದಾರೆ. ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಚಿತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.
ಕೃಪೆ ಕನ್ನಡ ಪ್ಲಸ್ ಫ್ಯಾಮಿಲಿ ನ್ಯೂಸ್