ರಾಯಲ್ ಚಾಲೆಂಜರ್ಸ್ ಮತ್ತು ಕ್ರಿಸ್ ಗೇಲ್ ಕುರಿತು ಟ್ವೀಟ್ ಮಾಡಿದ ವಿರೇಂದ್ರ ಸೆಹ್ವಾಗ್!

ನ್ಯೂಸ್ ಕನ್ನಡ ವರದಿ-(20.04.18): ಇಂಡಿಯನ್ ಪ್ರೀಮಿಯರ್ ಲೀಗ್ ನ ಹಿಂದಿನ ಎಲ್ಲಾ ಆವೃತ್ತಿಗಳಲ್ಲಿ ಕ್ರಿಸ್ ಗೇಲ್ ಎಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಯಲ್ ಚಾಲೆಂಜರ್ಸ್ ಎಂದರೆ ಕ್ರಿಸ್ ಗೇಲ್ ಎಂಬಂತಿತ್ತು. ಆದರೆ ಕಳೆದ ಐಪಿಎಲ್ ಆವೃತ್ತಿಯಲ್ಲಿ ಕ್ರಿಸ್ ಗೇಲ್ ಅಬ್ಬರಿಸುವಲ್ಲಿ ವಿಫಲರಾಗಿದ್ದರು. ಈ ಕಾರಣದಿಂದಾಗಿ ರಾಯಲ್ ಚಾಲೆಂಜರ್ಸ್ ತಂಡವು ಕ್ರಿಸ್ ಗೇಲ್ ರನ್ನು ತಂಡದಲ್ಲಿ ಉಳಿಸಿಕೊಂಡಿರಲಿಲ್ಲ. ಬಳಿಕ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯ ಮೊದಲ ದಿನದಲ್ಲಿ ಕ್ರಿಸ್ ಗೇಲ್ ಹರಾಜಾಗಿರಲಿಲ್ಲ. ಬಳಿಕ ಪಂಜಾಬ್ ತಂಡಕ್ಕೆ ವಿರೇಂದ್ರ ಸೆಹ್ವಾಗ್ ರ ಸಲಹೆಯ ಮೇರೆಗೆ ಖರೀದಿಸಿದ್ದರು.

ಇದೀಗ ಈ ಆವೃತ್ತಿಯ ಐಪಿಎಲ್ ನಲ್ಲಿ ಕ್ರಿಸ್ ಗೇಲ್ ಮತ್ತೆ ಅಬ್ಬರಿಸಲು ಪ್ರಾರಂಭಿಸಿದ್ದಾರೆ. ಮೊದಲ ಪಂದ್ಯಾಟದಲ್ಲಿ 66 ರನ್ ದಾಖಲಿಸಿದ್ದ ಕ್ರಸ್ ಗೇಲ್ ನಿನ್ನೆ ಹೈದರಾಬಾದ್ ವಇರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಶತಕ ದಾಖಲಿಸಿದ್ದರು. ಇದೀಗ ಈ ಕುರಿತಾದಂತೆ ಪಂಜಾಬ್ ತಂಡದ ಕೋಚ್ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದು, ಟ್ವೀಟ್ ನಲ್ಲಿ ಆರ್ಸಿಬಿಯಲ್ಲಿದ್ದ ಮತ್ತು ಪಂಜಾಬ್ ತಂಡದಲ್ಲಿದ್ದ ಎರಡು ಫೋಟೊಗಳನ್ನು ಲಗತ್ತಿಸಿ, ನನ್ನ ವೈಫಲ್ಯಗಳ ಸಮಯದಲ್ಲಿ ನನ್ನನ್ನು ಬೆಂಬಲಿಸದಿದ್ದರೆ ನನ್ನ ಯಶಸ್ಸಿನ ಸಂದರ್ಭದಲ್ಲಿ ನನ್ನನ್ನು ಪ್ರೀತಿಸಲು ಅರ್ಹರಲ್ಲ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ಟ್ವೀಟ್ ಆರ್ಸಿಬಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಂತೂ ಸುಳ್ಳಲ್ಲ.

Leave a Reply

Your email address will not be published. Required fields are marked *