ಉತ್ತರಪ್ರದೇಶದಲ್ಲಿ ನಿಲ್ಲದ ಅತ್ಯಾಚಾರ ಸರಣಿ: 14 ರ ಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ!
ನ್ಯೂಸ್ ಕನ್ನಡ ವರದಿ-(20.04.18): ಉತ್ತರಪ್ರದೇಶ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಉನ್ನಾವೋ ಅತ್ಯಾಚಾರ ಪ್ರಕರಣದ ಬಳಿಕ ಸುಮಾರು 10ರಷ್ಟು ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ಇದೀಗ ಇನ್ನೊಂದು ಅತ್ಯಾಚಾರ ಪ್ರಕರಣದ ಕುರಿತು ವರದಿಯಾಗಿದ್ದು, 14 ವರ್ಷದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆಯು ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯ ಸಿಕಂದ್ರಾ ರಾವ್ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಬಾಲಕಿಯು ಕಳೆದ ಭಾನುವಾರ ತನ್ನ ಮನೆಗೆ ತಾಗಿಕೊಂಡಿರುವ ಹೊಲಕ್ಕೆ ಹೋಗಿದ್ದಾಗ ಅಲ್ಲಿ ಕಾಮಾಂಧರು ಆಕೆಯ ಮೇಲೆ ಮುಗಿಬಿದ್ದು ಅತ್ಯಾಚಾರ ನಡೆಸಿದರು ಎಂದು ಸಿಕಂದ್ರಾ ರಾವ್ ಪಟ್ಟಣದ ಎಸ್ಎಚ್ಓ ಮನೋಜ್ ಶರ್ಮಾ ತಿಳಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ; ಆಕೆಯ ತಂದೆ ಕೊಟ್ಟಿರುವ ದೂರಿನ ಪ್ರಕಾರ ಇಬ್ಬರು ಆರೋಪಿಗಳನ್ನು ಎಫ್ಐಆರ್ನಲ್ಲಿ ಹೆಸರಿಸಲಾಗಿದೆ ಎಂದು ಶರ್ಮಾ ಹೇಳಿದರು.