ಟಿಪ್ಪು ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿದ ಕೀರ್ತಿ ಸಿದ್ಧರಾಮಯ್ಯಗೆ ಸಲ್ಲುತ್ತದೆ: ಶೋಭಾ ಕರಂದ್ಲಾಜೆ

ನ್ಯೂಸ್ ಕನ್ನಡ ವರದಿ(20/04-2018): ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿದ ಕೀರ್ತಿ ಸಿಎಂ ಸಿದ್ಧರಾಮಯ್ಯನವರಿಗೆ ಸಲ್ಲುತ್ತದೆ ಎಂದು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

70 ವರ್ಷಗಳಲ್ಲಿ ರಾಜ್ಯಕ್ಕೆ ಕಾಂಗ್ರೆಸ್​ನಿಂದ ಸಾಕಷ್ಟು ಸಿಎಂ ಬಂದಿದ್ದಾರೆ. ಆದರೆ ಯಾರಿಗೂ ಟಿಪ್ಪು ಮೂಲಕ ರಾಜಕೀಯ ಮಾಡಲು ತೋಚಲಿಲ್ಲ. ಆದರೆ ಸಿದ್ಧರಾಮಯ್ಯ ಕೇವಲ ರಾಜಕೀಯಕ್ಕೋಸ್ಕರ ಟಿಪ್ಪವನ್ನು ಬಳಸಿಕೊಂಡು ಜಾತಿ ಧರ್ಮವನ್ನು ಒಡೆದರು. ಈ ಬಾರಿಯ ಚುನಾವಣೆ ಧರ್ಮ ಹಾಗೂ ಅಧರ್ಮ, ಸತ್ಯ ಹಾಗೂ ಸುಳ್ಳು, ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ಚುನಾವಣೆ ಎಂದು ಹೇಳಿದರು.

ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಇದುವರೆಗೂ ಪರಿಹಾರ ನೀಡದ ರಾಜ್ಯ ಸರಕಾರ,ದನಗಳ್ಳರಿಗೆ ಪರಿಹಾರವನ್ನು ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ರಾಜ್ಯ ಸರ್ಕಾರವೇ ಕಾರಣ. ಕೇಂದ್ರದಿಂದ ಬಂದ ಅನುದಾನವನ್ನು ಜನರಿಗೆ ನೀಡದೆ ರಾಜ್ಯ ಸರಕಾರ ತಿಂದು ನೀರು ಕುಡಿದಿದೆ ಎಂದು ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *