ಟ್ವಿಟ್ಟರ್ ಮೂಲಕ ಇಶಾನ್ ಕಿಶನ್ ಕ್ಷಮೆ ಯಾಚಿಸಿದ ಹಾರ್ದಿಕ್ ಪಾಂಡ್ಯಾ!

ನ್ಯೂಸ್ ಕನ್ನಡ ವರದಿ-(20.04.18): ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳುವುದಕ್ಕಿಂತ ಮುಂಚೆ ಹಲವು ಪ್ರಾದೇಶಿಕ ಹಾಗೂ ದೇಶೀಯ ಆಟಗಾರರ ಕುರಿತು ಯಾರಿಗೂ ತಿಳಿದಿರಲಿಲ್ಲ. ಐಪಿಎಲ್ ಪ್ರಾರಂಬವಾದ ಬಳಿಕ ಹಲವಾರು ಪ್ರತಿಭೆಗಳು ಜಗತ್ತಿಗೆ ಪರಿಚಯಿಸಲ್ಪಟ್ಟಿತು. ಅಂಥಹಾ ಒಬ್ಬ ಪ್ರತಿಭೆಯಾಗಿದ್ದಾರೆ ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಇಶಾನ್ ಕಿಶನ್. ಓರ್ವ ಉತ್ತಮ ಬ್ಯಾಟ್ಸ್ ಮನ್ ಮಾತ್ರವಲ್ಲದೇ ಉತ್ತಮ ವಿಕೆಟ್ ಕೀಪರ್ ಆಗಿಯೂ ಇಶಾನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಇಶಾನ್ ಕಿಶನ್ ಬಳಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯಾ ಕ್ಷಮೆ ಯಾಚಿಸಿದ್ದಾರೆ.

ಮೊನ್ನೆ ತಾನೇ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಹಾರ್ದಿಕ್ ಪಾಂಡ್ಯಾ ಎಸೆತವೊಂದು ಕೀಪರ್ ಇಶಾನ್ ಕಿಶನ್ ಕಣ್ಣಿನ ಅಂಚನ್ನು ಗಾಯಗೊಳಿಸಿತ್ತು. ಚೆಂಡು ಬಿದ್ದ ರಭಸಕ್ಕರ ಇಶಾನ್ ನೆಲಕ್ಕುರುಳಿದ್ದರು. ಈ ಕುರಿತಾದಂತೆ ಇದೀಗ ಟ್ವಿಟ್ಟರ್ ನಲ್ಲಿ ಇಶಾನ್ ಕಿಶನ್ ರೊಂದಿಗೆ ಫೋಟೊ ಪ್ರಕಟಿಸಿರುವ ಹಾರ್ದಿಕ್, ಮೇರಾ ಕ್ಯೂಟೀ ಪೈ, ಸ್ವಾರಿ ಭಾಯ್… ಸ್ಟೇ ಸ್ಟ್ರೋಂಗ್ ಎಂದು ಬರೆದುಕೊಂಡಿದ್ದಾರೆ. ಇಶನ್ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ.

https://youtu.be/VVUfGekQpDY

Leave a Reply

Your email address will not be published. Required fields are marked *