ಟಿ-ಟ್ವೆಂಟಿ ಪಂದ್ಯಗಳ ಬಳಿಕ ಇದೀಗ 100 ಎಸೆತಗಳ ಕ್ರಿಕೆಟ್ ಪಂದ್ಯ ಪ್ರಾರಂಭ?

ನ್ಯೂಸ್ ಕನ್ನಡ ವರದಿ(20-04-2018): ಒಂದು ದಿನ ನಡೆಯುತ್ತಿದ್ದ 50 ಓವರ್ ಗಳ ಕ್ರಿಕೆಟ್ ಪಂದ್ಯಾಟವನ್ನು ಟಿಟ್ವೆಂಟಿ ಮೂಲಕ 20 ಓವರ್ ಗಳಿಗೆ ಕಡಿತ ಗೊಳಿಸಿ ಅದು ಯಶಸ್ವಿಯಾದ ಬೆನ್ನಲ್ಲೇ ಇದೀಗ ಕೇವಲ 100 ಬಾಲುಗಳಿರುವ ಕ್ರಿಕೆಟ್ ಪಂದ್ಯಾಟವನ್ನು ನಡೆಸಲು ಇಂಗ್ಲೆಂಡ್ ಮುಂದಾಗಿದೆ.

ಇಂಗ್ಲೆಂಡಿನ ವೇಲ್ಸ್ ಕ್ರಿಕೆಟ್ ಮಂಡಳಿಯು ಈ ಕುರಿತು ರೂಪು ರೇಷೆಗಳನ್ನು ಸಿದ್ಧ ಪಡಿಸುತ್ತಿದ್ದು, ಈ ಪಂದ್ಯಾಟದಲ್ಲಿ ಆಡುವ ಪ್ರತೀ ತಂಡವು 8 ಆಟಗಾರರನ್ನು ಒಳಗೊಂಡಿರುತ್ತದೆ.

6 ಎಸೆತಗಳ 15 ಓವರ್ ಗಳು ಹಾಗೂ ಹತ್ತು ಎಸೆತದ ಒಂದು ಓವರ್ ನ್ನು ಎಸೆಯುವ ಈ ಪಂದ್ಯಾಟವು 3 ಗಂಟೆಗಳಲ್ಲಿ ಮುಕ್ತಾಯವಾಗಲಿದೆ.

Leave a Reply

Your email address will not be published. Required fields are marked *