ಪ್ರಚೋದನಕಾರಿ ಭಾಷಣ : ಕಲ್ಲಡ್ಕ ಭಟ್ ಬಂಧಿಸುವಂತೆ ಚುನಾವಣಾಧಿಕಾರಿಗೆ ಜಿಲ್ಲಾ ಕಾಂಗ್ರೆಸ್ ದೂರು
ನ್ಯೂಸ್ ಕನ್ನಡ ವರದಿ(07-04-2018): ಬಂಟ್ವಾಳ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕೋಮುಧ್ವೇಶದ ಭಾಷಣ ಮಾಡಿದ್ದು, ಚುನಾವಣಾ ಸಮಯದಲ್ಲಿ ಕೋಮು ಸೌಹಾರ್ಧಕ್ಕೆ ದಕ್ಕೆ ತರುವ ರೀತಿಯಲ್ಲಿ ಮಾತನಾಡಿದ ಕಲ್ಲಡ್ಕ ಭಟ್ ಅವರನ್ನು ಶೀಘ್ರವೇ ಬಂಧಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಘಟವು ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ.
ಸಚಿವರೋರ್ವರನ್ನು ಏಕವಚನದಲ್ಲಿ ನಿಂದಿಸಿ ಮಾತಾನಾಡಿದುದಲ್ಲದೇ, ಚುನಾವಣಾ ನೀತಿ ಸಂಹಿತೆಯನ್ನು ಗೇಲಿ ಮಾಡಿದ್ದ ಪ್ರಭಾಕರ್ ಭಟ್ ಅವರನ್ನು ರಾಜ್ಯದ ಚುನಾವಣೆಯು ಮುಗಿಯುವ ವರೆಗೆ ಬಂಧನದಲ್ಲಿಡಬೇಕೆಂದು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನೇತೃತ್ವದ ಜಿಲ್ಲಾ ಕಾಂಗ್ರೆಸ್ ಮುಖಂಡರ ನಿಯೋಗವು ಚುನಾವಣಾಧಿಕಾರಿ ವೈಶಾಲಿ ಅವರಿಗೆ ಈ ಕುರಿತು ದೂರನ್ನು ಸಲ್ಲಿಸಿತು.