ಮೈಸೂರು; ವಿಕೋಪಕ್ಕೆ ತಿರುಗಿದ ಪ್ರತಿಭಟನೆ; ಕಲ್ಲುತೂರಾಟದಲ್ಲಿ ಇನ್ ಸ್ಪೆಕ್ಟರ್ ಸೇರಿದಂತೆ 8 ಮಂದಿಗೆ ಗಾಯ!

ನ್ಯೂಸ್ ಕನ್ನಡ ವರದಿ-(20.04.18): ಜಮ್ಮು ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಸಂಘಟನೆಯೊಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯು ವಿಕೋಪಕ್ಕೆ ತಿರುಗಿ ಗಲಭೆ ಸಂಭವಿಸಿದೆ. ಗಲಭೆಯಲ್ಲಿ ಕಲ್ಲುತೂರಾಟ ನಡೆದಿದ್ದು, ಪೊಲೀಸ್ ಇನ್ ಸ್ಪೆಕ್ಟರ್ ಸೇರಿದಂತೆ ಒಟ್ಟು 8 ಮಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಕಲ್ಲುತೂರಾಟ ನಡೆಸಿದವರು ಪ್ರತಿಭಟನಾ ನಿರತರೋ ಅಥವಾ ಹೊರಗಿನಿಂದ ನಡೆಸಲಾಗಿದೆಯೇ ಎನ್ನುವ ಕುರಿತು ಸಂಪುರ್ನ ಮಾಹಿತಿಯು ಲಭ್ಯವಾಗಿಲ್ಲ. ಕಲ್ಲುತೂರಾಟದಲ್ಲಿ ಇನ್ ಸ್ಪೆಕ್ಟರ್ ಅನಿಲ್ ಕುಮಾರ್ ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಘಟನೆಯಿಂದ ಮೈಸೂರಿನಾದ್ಯಂತ ಉದ್ವಿಗ್ನ ಪರಿಸ್ಥಿತಿಯು ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *