ಕಾಪು: ಕೊನೆಗೂ ಬಿಜೆಪಿ ಅಭ್ಯರ್ಥಿ ಹೆಸರು ಘೋಷಣೆ

ನ್ಯೂಸ್ ಕನ್ನಡ ವರದಿ-(20.04.18): ಕಾಪು: ಕಾಪು ಕ್ಷೇತ್ರದ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರಬಲರಾಗಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್‍ ರವರ ಹೆಸರು ರಾಜ್ಯ ಬಿಜೆಪಿ ಅಧೀಕೃತವಾಗಿ ಘೋಷಣೆ ಮಾಡುವ ಮೂಲಕ ಇದೀಗ ಹಲವಾರು ಗೊಂದಲಕ್ಕೆ ತೆರೆಹಾಕಿದೆ.

ಕಳೆದ ಬಾರಿಯ ಚುನಾವಣಾ ಸಂದಂರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆಯವರ ಹೆಸರು ಈ ಬಾರಿ ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಂಡು ಬಂದಿದ್ದು, ಮಾಜಿ ಶಾಸಕ ಲಾಲಾಜಿ ಮೆಂಡನ್ ಹಾಗು ಸುರೇಶ್ ಶೆಟ್ಟಿ ಗುರ್ಮೆಯವರ ನಡುವೆ ಟಿಕೆಟಿಗಾಗಿ ಬಹಳಷ್ಟು ಪೈಪೋಟಿ ನಡೆದಿದ್ದು,ಕೊನೆಯ ಕ್ಷಣ ಗುರ್ಮೆಯವರಿಗೆ ಟಿಕೆಟ್ ನೀಡದೆ ಪಕ್ಷ ನಿರಾಸೆ ಮೂಡಿಸಿದ್ದು, ಗುರ್ಮೆಯವರ ಮುಂದಿನ ಬೆಳವಣಿಗೆಯ ಬಗ್ಗೆ ಬೆಂಬಲಿಗರಿಂದ ಚರ್ಚೆ ನಡೆಯುತ್ತಿದೆ.

Leave a Reply

Your email address will not be published. Required fields are marked *