ಲಿಂಗಾಯತರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಎಂದು ಕರೆ ನೀಡಿದ ಮಾತೆ ಮಹಾದೇವಿ!

ನ್ಯೂಸ್ ಕನ್ನಡ ವರದಿ(07-04-2018): ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಮತವನ್ನು ನೀಡಬೇಕೆಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಕರೆ ನೀಡಿದ್ದಾರೆ.

ಎಲ್ಲಾ ಲಿಂಗಾಯತರು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಬಸವ ಮಂಟಪದಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾದಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಸಿದ್ಧರಾಮಯ್ಯನವರು ತೋರಿದ ಮುತವರ್ಜಿಗಾಗಿ ಈ ಬೆಂಬಲವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಮೌನ ನಮಗೆ ಯಾವುದೇ ಬೆಂಬಲ ನೀಡಲಿಲ್ಲ. ಇನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಲಿಂಗಾಯತ ಧರ್ಮದ ಬಗ್ಗೆ ನೀಡಿರುವ ಹೇಳಿಕೆಗಳಲ್ಲಿ ಗೊಂದಲವಿದೆ ಎಂದು ಮಾತೆ ಮಹಾದೇವಿ ಹೇಳಿದ್ದಾರೆ. ಅಲ್ಲದ ಅಮಿತ್ ಶಾ ಅವರೇ ನೀವು ಜೈನ ಧರ್ಮದವರು , ಭಾರತದ ಐಕ್ಯತೆಗೆ ಭಂಗ ತಂದಿದ್ದೀರಾ? ದೇಶ ಒಡೆದಿದ್ದೀರಾ? ಬೌದ್ಧ ಧರ್ಮವು ಹಿಂದೂ ಧರ್ಮ ಮತ್ತು ದೇಶವನ್ನು ಒಡೆದಿದೆಯೇ? ಎಂದು ಪ್ರಶ್ನಿಸಿದ್ದು, ಲಿಂಗಾಯತ ಹಿಂದೂ ಧರ್ಮ ವಿರೋಧಿಯಲ್ಲ, ಅದಕ್ಕಿಂತ ಭಿನ್ನ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *