ಐದು ವರ್ಷಗಳಲ್ಲೇ ಗರಿಷ್ಠ ದರಕ್ಕೆ ಜಿಗಿದ ಪೆಟ್ರೋಲ್!
ನ್ಯೂಸ್ ಕನ್ನಡ ವರದಿ-(21.04.18): ದೈನಂದಿನ ಅವಶ್ಯವಾದ ಪೆಟ್ರೋಲ್ ಬೆಲೆಯು ಸದ್ಯ ಗಗನಕ್ಕೇರಿದೆ. ಕಳೆದ 5 ವರ್ಷಗಳಲ್ಲೇ ಪೆಟ್ರೋಲ್ ಬೆಲೆಯು ಗರಿಷ್ಠ ಮಟ್ಟಕ್ಕೆ ತಲುಪಿದೆ. ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಪೆಟ್ರೋಲ್ ಬೆಲೆಯು ಬರೋಬ್ಬರಿ 74.08ರೂ.ಗೆ ಏರಿಕೆಯಾಗಿದೆ. ಈ ಮೊದಲು 2013ರಲ್ಲಿ ಪೆಟ್ರೋಲ್ ದರವು 74.10ರೂ. ಇತ್ತು.
ಕೋಲ್ಕೊತಾ, ಮುಂಬಯಿ, ಚೆನ್ನೈನಲ್ಲೂ ಪೆಟ್ರೋಲ್ ದರವು ಗರಿಷ್ಠ ಮಟ್ಟಕ್ಕೆ ಏರಿದ್ದು ಕ್ರಮವಾಗಿ ರೂ.76.78, ರೂ.81.93 ಮತ್ತು ರೂ.76.85 ಇದೆ. 2014ರ ಆಗಸ್ಟ್ನಲ್ಲಿ ಕೋಲ್ಕೊತಾದಲ್ಲಿ ಪೆಟ್ರೋಲ್ ದರವು ರೂ.78.03 ತಲುಪಿತ್ತು. ಮುಂಬಯಿನಲ್ಲಿ ರೂ.82.07(ಮಾರ್ಚ್ 2014) ಮತ್ತು ಚೆನ್ನೈನಲ್ಲಿ ರೂ.76.93(ಜುಲೈ 2014) ನಿಗದಿಯಾಗಿತ್ತು. ಇತ್ತ, ಪೆಟ್ರೋಲ್ನಂತೆಯೇ ಡೀಸೆಲ್ ಸಹ ದರ ಏರಿಕೆಯಲ್ಲಿ ದಾಖಲೆಯನ್ನೇ ಸೃಷ್ಟಿಸಿದೆ. ದಿಲ್ಲಿ, ಕೋಲ್ಕೊತಾ, ಮುಂಬಯಿ, ಚೆನ್ನೈನಲ್ಲಿ ಕ್ರಮವಾಗಿ ರೂ.65.31, ರೂ.68.01, ರೂ.69.54 ಮತ್ತು ರೂ.68.90 ತಲುಪಿದೆ.