ಲವರ್ ಜೊತೆ ಮದುವೆಯಾಗಲು ₹6 ಲಕ್ಷ ಕದ್ದ, ಆಕೆ ಕೈಕೊಟ್ಟಾಗ ಆ ಹಣವನ್ನು ಏನು ಮಾಡಿದ ಗೊತ್ತಾ?
ನ್ಯೂಸ್ ಕನ್ನಡ ವರದಿ: ಈಗೀಗ ಕಾಲದಲ್ಲಿ ಚಿತ್ರ ವಿಚಿತ್ರ ಸುದ್ದಿಗಳನ್ನು ನಾವು ಕೇಳುತ್ತೇವೆ, ನೋಡುತ್ತೇವೆ. ಇಲ್ಲಿದೆ ಅಂತಹದ್ದೇ ಒಂದು ವಿಚಿತ್ರ ಸುದ್ದಿ. ಪ್ರೀತಿಯಲ್ಲಿ ಬಿದ್ದು ಏನೇನೋ ಮಾಡುವವರಿದ್ದಾರೆ, ಯಾವುದೇ ಹಂತಕ್ಕೆ ಇಳಿದು ತಮ್ಮ ಪ್ರೀತಿ ಪಡೆದೇ ತೀರಬೇಕು ಎಂದು ಹಠ ಸಾಧಿಸುವವರಿದ್ದಾರೆ, ಅದಕ್ಕಾಗಿ ಯಾವುದೇ ಅಪಾಯವನ್ನು ಮೈಗೆಳೆದುಕೊಳ್ಳಲೂ ರೆಡಿ ಇರುತ್ತಾರೆ. ಇಂತಹ ಒಂದು ಘಟನೆ ಮಧ್ಯಪ್ರದೇಶದ ಸೆಹೋರ್ದಲ್ಲಿ ನಡೆದಿದೆ. ಇಲ್ಲಿನ ಫೈನಾನ್ಸ್ ಕಂಪನಿವೊಂದರಲ್ಲಿ ಕಾಯ೯ನಿವ೯ಹಿಸುತ್ತಿದ್ದ ಜಿತೇಂದ್ರ ಗೋಯಲ್ ಎನ್ನುವ 22 ವಷ೯ ಪ್ರಾಯದ ಒಬ್ಬ ವ್ಯಕ್ತಿ ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಮದುವೆಯಾಗಲು 6.74 ಲಕ್ಷ ಹಣ ಕದ್ದಿದ್ದಾನೆ.
ಹಣ ಕದ್ದ ನಂತರ ಜಿತೇಂದ್ರ ತಾನು ಪ್ರೀತಿಸುತ್ತಿದ್ದ ಯುವತಿಯ ಬಳಿ ಹೋಗಿ ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ. ಆದರೆ ಅದಕ್ಕೆ ನಿರಾಕರಿಸಿದ ಯುವತಿ, ತನಗೆ ಬೇರೊಬ್ಬರೊಂದಿಗೆ ಮದುವೆ ನಿಶ್ಚಯ ಆಗಿರುವುದಾಗಿ ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡ ಜಿತೇಂದ್ರ 5 ಲಕ್ಷ ಹಣ ಸುಟ್ಟು ಹಾಕಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಹಾಕಿದ್ದಾನೆ. ಜೊತೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮುಂದಾಗಿದ್ದಾಗಿ ಪೋಲಿಸರಿಗೆ ತಿಳಿಸಿದ್ದಾನೆ.