ಮಂಡ್ಯ ವಿಧಾನ ಸಭಾ ಟಿಕೆಟ್ ತನ್ನ ಆಪ್ತನಿಗೆ ನಿಡಲಿದ್ದಾರೆಯೇ ಅಂಬರೀಷ್?!

ನ್ಯೂಸ್ ಕನ್ನಡ ವರದಿ(21-04-2018): ಈಗಾಗಲೇ ಮಂಡ್ಯದ ಟಿಕೆಟ್ ಪಡೆದುಕೊಂಡಿದ್ದು ಇದುವರೆಗೂ ಬಿಫಾರಂ ಪಡೆದುಕೊಳ್ಳದ ಮಾಜಿ ಸಚಿವ ಅಂಬರೀಷ್ ತಾನು ಸ್ಪರ್ಧೆಯಿಂದ ಹಿಂದೆ ಸರಿದು ತನ್ನ ಆಪ್ತ ಅಮರಾವತಿ ಚಂದ್ರ ಶೇಖರ್ ಗೆ ಹಸ್ತಾಂತಲಿದ್ದಾರೆಯೇ?. ಹೌದು ಇಂತಹ ಮಾತೊಂದು ಅವರ ಆಪ್ತ ವಲಯದಿಂದ ಕೇಳಿಬರುತ್ತಿದೆ.

ಕ್ಷೇತ್ರಕ್ಕೆ ಭೇಟಿ ನೀಡದೆ ಮತದಾರರಿಂದ ದೂರವಿರುವ ಅಂಬರೀಷ್ ಮಂಡ್ಯದಲ್ಲಿ ಸ್ಪರ್ಧಿಸಿದರೆ ಗೆಲುವು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಅಂಬರೀಷ್ ಮಂಡ್ಯದ ಟಿಕೆಟನ್ನು ತನ್ನ ಆಪ್ತನಿಗೆ ಹಸ್ತಾಂತರಿಸಲು ಯೋಚಿಸುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ. ಈ ಕುರಿತು ನಿನ್ನೆ ರಾತ್ತಿ ಅಂಬರೀಷ್ ನಿವಾಸದಲ್ಲಿ ಮಾತುಕತೆಗಳೂ ನಡೆದಿದೆ ಎನ್ನಲಾಗುತ್ತಿದೆ.

ಟಿಕೆಟ್‌ ಘೋಷಣೆಯಾಗಿ ವಾರವೇ ಕಳೆದರೂ ಅಂಬರೀಷ್‌ ಮಾತ್ರ ಕ್ಷೇತ್ರದತ್ತ ತಲೆ ಹಾಕಿಲ್ಲ. ಯಾವುದೇ ಪ್ರಚಾರ ಸಭೆ ಸಮಾರಂಭಗಳೂ ನಡೆಸುತ್ತಿಲ್ಲ.ಈಗ ಎಲ್ಲ ಅಂದುಕೊಂಡಂತೆ ನಡೆದರೆ ಸೋಮವಾರ ಅಮರಾವತಿ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗುತ್ತದೆ.

Leave a Reply

Your email address will not be published. Required fields are marked *