ನ್ಯಾಯಮೂರ್ತಿ ಲೋಯಾರನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ: ರಾಹುಲ್ ಗಾಂಧಿ!
ನ್ಯೂಸ್ ಕನ್ನಡ ವರದಿ(21-04-2018): ನ್ಯಾಯಮೂರ್ತಿ ಬಿ.ಹೆಚ್.ಲೋಯಾ ಅವರನ್ನು ಭಾರತ ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ನಿಗೂಡ ಸಾವಿನ ಕುರಿತಂತೆ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪು ಅಸಮಧಾನ ತಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ರಾಹುಲ್ ಗಾಂಧಿಯವರು, ಲೋಯಾ ಅವರ ನಿಗೂಢ ಸಾವು ಕುರಿತಂತೆ ಕೆಲ ಭರವಸೆಗಳಿದ್ದವು. ಸತ್ಯ ಹೊರಬರಲಿದೆ ಎಂದು ಕೋಟ್ಯಾಂತರ ಭಾರತೀಯರು ಕಾಯುತ್ತಿದ್ದರು. ಆದರೆ ಇದೀಗ ಆ ಭರವಸೆಗಳೂ ಕೂಡ ಇಲ್ಲದಂತಾಗಿದೆ ಎಂದು ಲೋಯಾ ಅವರ ಕುಟುಂಬಸ್ಥರು ಹೇಳಿದ್ದಾರೆ. ನಾನು ಲೋಯಾ ಕುಟುಂಬಸ್ಥರಿಗೆ ಹೇಳಲು ಬಯಸುತ್ತೇನೆ, ಈಗಲೂ ಭರವಸೆಗಳಿವೆ.ಏಕೆಂದರೆ ಕೋಟ್ಯಾಂತರ ಭಾರತೀಯರು ಸತ್ಯವನ್ನು ನೋಡಲು ಬಯಸುತ್ತಿದ್ದಾರೆ. ಲೋಯಾ ಅವರನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಬರೆದಿದ್ದಾರೆ.
ಸೋಹ್ರಾಬುದ್ಧೀನ್ ನಕಲಿ ಎನ್ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿದ್ದ ಲೋಯಾ 2014ರಲ್ಲಿ ಹಠಾತ್ತನೆ ಹೃದಯಾಘಾತದಿಂದ ನಿಧನರಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಮಿತ್ ಶಾ ಅವರನ್ನು ಪ್ರಕರಣದಿಂದ ದೋಷ ಮುಕ್ತಗೊಳಿಸಲಾಗಿತ್ತು. ನಂತರ ಲೋಯಾ ಅವರ ನಿಗೂಢ ಸಾವಿನ ಕುರಿತು ತನಿಖೆ ನಡೆಯಬೇಕೆಂಬ ಕೂಗು ದೇಶಾದ್ಯಂತ ಕೇಳಿಬಂದಿತ್ತು.ಇದೀಗ ಯಾವುದೇ ತನಿಖೆ ಅಗತ್ಯವಿಲ್ಲವೆಂಬ ಸುಪ್ರೀಮ್ ಕೋರ್ಟ್ ತೀರ್ಪು ಬೇಸರತಂದಿದೆ ಎಂದರು.