ಸ್ವಂತ ತಂದೆಯಿಂದಲೇ ಅತ್ಯಾಚಾರ: ಮನನೊಂದ 13ರ ಬಾಲಕಿ ಆತ್ಮಹತ್ಯೆಗೆ ಶರಣು!

ನ್ಯೂಸ್ ಕನ್ನಡ ವರದಿ-(21.04.18): ದೇಶದೆಲ್ಲೆಡೆ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಕುರಿತಾದಂತೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರೂ ಸರಕಾರ ಮಾತ್ರ ಮೌನವಾಗಿದೆ. ಇದೀಗ ಇನ್ನೊಂದು ಅತ್ಯಾಚಾರ ಪ್ರಕರಣವು ವರದಿಯಾಗಿದ್ದು, ಸ್ವಂತ ತಂದೆಯಿಂದಲೇ ಅತ್ಯಾಚಾರಕ್ಕೊಳಗಾದ 13 ರ ಹರೆಯದ ಬಾಲಕಿಯೋರ್ವಳು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆಯು ಬಿಹಾರದ ಚಂಪರ್ಣ ಜಿಲ್ಲೆಯ ಮಜಾಹುಲಿ ಎಂಬಲ್ಲಿ ನಡೆದಿದೆ.

30 ವರ್ಷದ ಕಾಮುಕ ತನ್ನ ಮಗಳ ಮೇಲೆಯೇ ಅಟ್ಟಹಾಸ ಮೆರೆದಿದ್ದಾನೆ. ಇದರಿಂದ ನೊಂದ ತಾಯಿ-ಮಗಳು ಗ್ರಾಮದ ಪಂಚಾಯಿತಿ ಬಳಿ ನ್ಯಾಯಕ್ಕಾಗಿ ಮೊರೆ ಹೋಗಿದ್ದರು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಬಾಲಕಿ ಖಿನ್ನತೆಗೊಳಗಾಗಿದ್ದಳು. ಕೊನೆಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *