ಟೈಮ್ಸ್ ಮ್ಯಾಗಝಿನ್ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹೆಸರು!

ನ್ಯೂಸ್ ಕನ್ನಡ ವರದಿ(21-04-2018): ಟೈಮ್ಸ್ ಮ್ಯಾಗಝಿನ್ ಬಿಡುಗಡೆ ಮಾಡಿದ 100 ಹೆಚ್ಚು ಪ್ರಭಾವಿತರು ಪಟ್ಟಿಯಲ್ಲಿ ಭಾರತ ತಂಡದ ಹಾಗೂ ಆರ್ಸಿಬಿ ತಂಡದ ನಾಯಕರಾದ ವಿರಾಟ್ ಕೊಹ್ಲಿ ಸ್ಥಾನವನ್ನು ಪಡೆದಿದ್ದಾರೆ.

ಬಹುತೇಕ ಯುಎಸ್ ನ ಕ್ರೀಡಾ ಸಾಧಕರನ್ನು ಹೊಂದಿರುವ ಪಟ್ಟಿಯಲ್ಲಿ ಸಚಿನ್ ಅವರ ನೆಚ್ಚಿನ ಟೆನಿಸ್ ದಿಗ್ಗಜ ರೊಜರ್ ಫೆಡರರ್ (ಸ್ವಿಟ್ಜರ್ಲೆಂಡ್) ಹಾಗೂ 29 ವರ್ಷ ವಯಸ್ಸಿನ ಕೊಹ್ಲಿ ಅವರು ಮಾತ್ರ ಯುಎಸ್ ಹೊರಗಿನ ಕ್ರೀಡಾಪಟುಗಳೆನಿಸಿಕೊಂಡಿದ್ದಾರೆ.

ನಾನು ಈ ವಿಶ್ವದ ಪ್ರಭಾವಿತರ ಪಟ್ಟಿಯಲ್ಲಿ ಸೇರಲು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕಾರಣರಾಗಿದ್ದು, ಅದಕ್ಕಾಗಿ ನಾನು ಸಚಿನ್ ಗೆ ದನ್ಯವಾದಗಳನ್ನು ಹೇಳಬಯಸುತ್ತೇನೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *