ಉತ್ತರ ಪ್ರದೇಶ: ದೂರು ದಾಖಲಿಸಬೇಕಾದರೆ ಫಿಝಾ ತಂದುಕೊಡು ಎಂದ ಪೋಲೀಸ್ ಇನ್ಸ್ ಪೆಕ್ಟರ್!
ನ್ಯೂಸ್ ಕನ್ನಡ ವರದಿ(21-04-2018): ದೂರನ್ನು ದಾಖಲಿಸ ಬೇಕಾದರೆ ತನಗೆ ರೆಸ್ಟೋರೆಂಟ್ ನಿಂದ ಫಿಝಾ ತಂದುಕೊಡುವಂತೆ ದೂರುಗಾರರ ಮೇಲೆ ಮಹಿಳಾ ಪೋಲೀಸ್ ಇನ್ಸ್ ಪೆಕ್ಟರ್ ಒತ್ತಡ ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ವರದಿಯಾಗುತ್ತಿದ್ದಂತೆ ಮಹಿಳಾ ಇನ್ಸ್ ಪೆಕ್ಟರ್ ರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಲಕ್ನೋ ಸಮೀಪದ ಹಜ್ರತ್ಗಂಜ್ ಪೊಲೀಸ್ ಠಾಣೆಗೆ ರೆಸ್ಟೊರೆಂಟ್ ಮಾಲೀಕ ರೋಹಿತ್ ಬೆರ್ರಿ, ಹಣ ಪಾವತಿಸದ ವ್ಯಕ್ತಿಯೊಬ್ಬನ ವಿರುದ್ಧ ದೂರನ್ನು ದಾಖಲಿಸಲು ಬಂದಾಗ ಎಫ್ಐಆರ್ ದಾಖಲಿಸಿಕೊಂಡ ಸಬ್ ಇನ್ಸ್ಪೆಕ್ಟರ್ ಪಿಝಾಗೆ ಬೇಡಿಕೆ ಇಟ್ಟಿದ್ದಾರೆ. ಎಫ್ಐಆರ್ ನಕಲನ್ನು ತೆಗೆದುಕೊಳ್ಳಲು ಬರುವಾಗ ಪಿಝಾವನ್ನು ತರುವಂತೆ ಕೇಳಿದ್ದಾರೆ.
ಎಫ್ಐಆರ್ ಮಾಡಿದ ದಾಖಲೆ ಪಡೆದುಕೊಳ್ಳಲು ಬರುವಾಗ ಪಿಝಾ ತರುವಂತೆ ಇನ್ಸ್ ಪೆಕ್ಟರ್ ನನಗೆ ಒತ್ತಡಹಾಕಿದ್ರು, ಇದು ಸಾಮಾಜಿಕ.ತಾಣದಲ್ಲಿ ವೈರಲಾಗುತ್ತಿದ್ದಂತೆ ನನಗೆ ಪಿಝಾದ.ಹಣವನ್ನು ಮರಳಿಸಿದ್ದಾರೆ ಎಂದು ರೋಹಿತ್ ಬೆರ್ರಿ ಹೇಳಿಕೊಂಡಿದ್ದಾರೆ.