ಉಡುಪಿ ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶೀರೂರು ಶ್ರೀ ಕಣಕ್ಕೆ!
ನ್ಯೂಸ್ ಕನ್ನಡ ವರದಿ(21/04-2018): ಬಿಜೆಪಿ ಟಿಕೆಟ್ ಕೊಟ್ಟರೆ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ, ಇಲ್ಲದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿಯುತ್ತೇನೆಂದು ಹೇಳುತ್ತಿದ್ದ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಬಿಜೆಪಿ ಪಕ್ಷವು ತನ್ನ ಒತ್ತಡಕ್ಕೆ ಮಣಿದು ಕೊನೆಯ ಹಂತದಲ್ಲಿ ತನಗೆ ಉಡುಪಿಯಿಂದ ಪಕ್ಷದ ಟಿಕೆಟ್ ನೀಡಬಹುದೆಂಬ ನಿರೀಕ್ಷೆಯಲ್ಲಿದ್ದ ಶೀರೂರು ಶ್ರೀಗೆ ಕೊನೆಗೂ ನಿರಾಶೆಯಾಗಿದೆ. ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿಯು ಅಧಿಕೃತವಾಗಿ ರಘುಪತಿ ಭಟ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.
ಬಹಳ ಜಿದ್ದಾಜಿದ್ದಿನ ಕ್ಷೇತ್ರವಾದ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸಿನ ಸಚಿವ ಪ್ರಮೋದ್ ಮದ್ವರಾಜ್ ಹಾಗೂ ಬಿಜೆಪಿಯ ರಘುಪತಿ ಭಟ್ ನಡುವೆ ನೇರ ಸ್ಪರ್ಧೆ ನಡೆಯಲಿದ್ದು, ಶೀರೂರು ಶ್ರೀಗಳ ಸ್ಪರ್ಧೆಯು ರಘುಪತಿ ಭಟ್ ರ ಗೆಲ್ಲುವ ಕನಸಿಗೆ ಮುಳುವಾಗಲಿದೆ.