ಕಥುವಾ ಪ್ರಕರಣ: ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಬಾಲಕಿಯ ಮೇಲಿನ ಅತ್ಯಾಚಾರ ಸಾಬೀತು!
ನ್ಯೂಸ್ ಕನ್ನಡ ವರದಿ(21-04-2018): ದೇಶಾದ್ಯಂತ ಸಂಚಲನ ಮೂಡಿಸಿದ್ದ ಜಮ್ಮುವಿನ ಕಥುವಾದ ಬಾಲಕಿಯ ರೇಪ್ ಆ್ಯಂಡ್ ಮರ್ಡರ್ ಪ್ರಕರಣದಲ್ಲಿ ಬಾಲಕಿಯ ಮೇಲೆ ಆತ್ಯಾಚಾರ ನಡೆದಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ.ಪರೀಕ್ಷೆಯಿಂದ ಸಾಬೀತಾಗಿದೆ.
ವೆಜಿನಲ್ ಸ್ಕ್ಯಾಬ್ ಎಂಬ ಯೋನಿ ದ್ರವ ಮಾದರಿಯ ಪರೀಕ್ಷೆಯಿಂದ ಬಾಲಕಿಯ.ಮೇಲಿನ ಅತ್ಯಾಚಾರ ದೃಢಪಟ್ಟಿದ್ದು, ಪ್ರಕರಣದ ಅರೋಪಿಗಳ ಮಾದರಿ ಪರೀಕ್ಷೆಗೆ ತಾಳೆಯಾಗುತ್ತಿರುವುದು ಸ್ಪಷ್ಟವಾಗಿದೆ.
ಬಾಲಕಿಯ ಬಟ್ಟೆ, ಕೂದಲು, ಯೋನಿ ದ್ರವ, ಕರುಳಿನ ಮಾದರಿ, ಆರೋಪಿಗಳ ರಕ್ತ ಮಾದರಿ, ಹಾಗೂ ಬಾಲಕಿಯ ಮೇಲಿದ್ದ ಮಣ್ಣು ಸೇರಿದಂತೆ ಒಟ್ಟು14 ವಸ್ತು ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಪೋಲೀಸರು ಸಂಗರಹಿಸಿದ್ದ ಡಿಎನ್ ಎ ಮಾದರಿಗೂ ಆರೋಪಿಗಳ ಡಿಎನ್ ಎ ಗೂ ತಾಳೆಯಾಗುತ್ತಿದ್ದು , ಪರೀಕ್ಷೆಯ ವರದಿಯನ್ನು ಜಮ್ಮು ಕ್ರೈಂ ಬ್ರಾಂಚಿಗೆ ಕಳುಹಿಸಿಕೊಡಲಾಗಿದೆ ಎಂದು ಪ್ರಯೋಗಾಲದ ಅಧಿಕಾರಿಗಳು ತಿಳಿಸಿದ್ದಾರೆ.