ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಬೆಂಬಲಿಸುವ ಪ್ರಶ್ನೆಯೇ ಇಲ್ಲ: ಹಿಂದೂ ಮಹಾಸಭಾ!
ನ್ಯೂಸ್ ಕನ್ನಡ ವರದಿ(21-04-2018): ಭೃಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಮುಖ್ಯಮಂತ್ರಿಗಲು ಬೆಂಬಲಿಸುವ ಪ್ರಶ್ನೆಯೇ ಇಲ್ಲವೆಂದು ಹಿಂದೂ ಮಹಾಸಭಾದ ರಾಜ್ಯಾಧ್ಕಕ್ಷ ಎಸ್.ಎನ್. ಸುಬ್ರಹ್ಮಣ್ಯ ರಾಜು ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವವನ್ನು ಬೆಂಬಲಿಸುವ ಪಕ್ಷವೆಂದು ನಾವು ಬಿಜೆಪಿಯನ್ನು ಬೆಂಬಲಿಸುತ್ತಿದ್ದೆವು. ಆದರೆ ಯಾವಾಗ ಬಿಜೆಪಿ ಯಡಿಯೂರಪ್ಪನವರು ಮುಖ್ಯಮಂತ್ರಿಯೆಂದು ಘೋಷಿಸಿತೋ, ಅಂದಿನಿಂದ ಬಿಜೆಪಿಯನ್ನು ಬೆಂಬಲಿಸವುದನ್ನು ನಿಲ್ಲಿಸಿದ್ದೇವೆ ಎಂದರು.
ರಾಜ್ಯದ 30 ಕ್ಷೇತ್ರದಲ್ಲಿ ಬಿಜೆಪಿಯೆದುರು ಹಿಂದೂ ಮಹಾಸಭಾ ಸ್ಪರ್ಧೆ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಶಿವ ಸೇನೆ, ಶ್ರೀರಾಮ ಸೇನೆ, ಹಿಂದೂ ಜನ ಜಾಗೃತಿ ಸಮಿತಿ, ಹಿಂದೂ ಮಹಾಸಭಾ, ಸಂಪೂರ್ಣ ಭಾರತೀಯ ಕ್ರಾಂತಿ ಪಕ್ಷಗಳನ್ನು ಕೇಸರಿ ಪಡೆಯೊಂದನ್ನು ರಚಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ವಿ ಹೇಳಿದರು.