ನಳಿನ್ ಕುಮಾರ್ ಗೆಲುವಿಗಾಗಿ ಬಹಳಷ್ಟು ಹಣ ಖರ್ಚು ಮಾಡಿದ್ದೇನೆ; ಈಗ ನನಗೆ ದ್ರೋಹ ಮಾಡಿದ್ದಾರೆ: ಕೃಷ್ಣ ಪಾಲೇಮಾರ್

ನ್ಯೂಸ್ ಕನ್ನಡ ವರದಿ(21-04-2018): ನಳಿನ್ ಕುಮಾರ್ ಕಟೀಲ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಸಮಯದಲ್ಲಿವಅವರ ಗೆಲುವಿಗಾಗಿ ಬಹಳಷ್ಟು ಹಣವನ್ನು ಖರ್ಚು ಮಾಡಿದ್ದೇನೆ. ಈಗ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈತಪ್ಪಿಸುವ ಮೂಲಕ ನನಗೆ ವಿಶ್ವಾಸ ದ್ರೋಹ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಹೆಸರೇ ಮಂಗಳೂರು ಉತ್ತರ ಕ್ಷೇತ್ರಕ್ಕೆ ಫೈನಲ್ ಆಗಿದೆಯೆಂದು ಯಡಿಯೂರಪ್ಪ ನನಗೆ ಹೇಳಿದ್ದಾರೆ. ಈಗ ಟಿಕೆಟ್ ನನ್ನ ಕೈತಪ್ಪಿಸಿ ಭರತ್ ಶೆಟ್ಟಿಗೆ ಕೊಡಿಸುವ ಮೂಲಕ ನಳಿನ್ ಕುಮಾರ್ ದ್ರೋಹ ಮಾಡಿದ್ದಾರೆಂದರು.

ಹಿಂದುಳಿದ ವರ್ಗದ ಜನರನ್ನು ಕೇವಲ ಗಲಭೆ ಮಾಡಿಸಿ ಜೈಲಿಗೆ ಹೋಗಲು ಮಾತ್ರ ಬಿಜೆಪಿ ಬಳಸುತ್ತಿದೆ ಎಂದು ಆರೋಪಿಸಿದ ಪಾಲೇಮಾರ್ ಪಕ್ಷದ ಈ ನೀತಿ ಸರಿಯಲ್ಲ ಎಂದಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಆಕಾಂಕ್ಷಿಗಳಾಗಿದ್ದ ಸತ್ಯಜಿತ್ ಸರತ್ಕಲ್ ಹಾಗೂ ಪಾಲೇಮಾರ್ ಅಸಮಾಧಾನ ಗೊಳ್ಳುವ ಮೂಲಕ ಪಕ್ಷವು ಗೊಂದಲದ ಗೂಡಾಗಿದೆ.

Leave a Reply

Your email address will not be published. Required fields are marked *