ಬಿಜೆಪಿ ಮತ್ತು ಆರೆಸ್ಸೆಸ್ ನವರು ಹಿಂದೂಗಳೇ ಅಲ್ಲ: ಇಕ್ಬಾಲ್ ಅನ್ಸಾರಿ ವಿವಾದ!

ನ್ಯೂಸ್ ಕನ್ನಡ ವರದಿ(22-04-2018): ಬಿಜೆಪಿ ಹಾಗೂ ಸಂಘ ಪರಿವಾರದವರು ಹಿಂದೂ ಧರ್ಮದಲ್ಲಿ ಹುಟ್ಟಿರಬಹುದು ಆದರೆ ಅವರಿಗೆ ಹಿಂದೂ ಧರ್ಮದ ಕುರಿತು ಏನೂ ತಿಳಿದಿಲ್ಲ ಎಂದು ಹೇಳುವ ಮೂಲಕ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಹೊಸ ವಿವಾದವನ್ನು ಸೃಷ್ಟಿ ಮಾಡಿದ್ದಾರೆ.

ಮರ್ಯಾದ ಪುರುಷೋತ್ತಮ ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದವರು ಕೊಲೆ ಸುಲಿಗೆಗಳನ್ನು ಮಾಡುವ ಮೂಲಕ ರಾಮನ ಹೆಸರಿಗೆ ಕಳಂಕ ತರುತ್ತಿದ್ದಾರೆ ಎಂದ ಅವರು ಬಿಜೆಪಿಯವರು ಹೇಳುವುದು ಒಂದು ಮಾಡುವುದು ಇನ್ನೊಂದು ಎಂದು ಹೇಳಿದ್ದಾರೆ.

ಎಚ್.ಆರ್. ಶ್ರೀನಾಥ್ ಅವರು ನನ್ನ ಎದುರು ಅಮಾಯಕ ವ್ಯಕ್ತಿಯನ್ನು ಸ್ಪರ್ಧೆ ಮಾಡಿಸುವ ಮೂಲಕ ನನ್ನನ್ನು ಸೋಲಿಸಲು ಪ್ರಯತ್ನಿಸುತ್ತಿದ್ಜಾರೆ. ಅದರ ಬದಲಾಗಿ ಅವರಿಗೆ ಸ್ವತಹ ನನ್ನೆದುರು ಸ್ಪರ್ಧಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *