ವರನೊಂದಿಗೆ ಹಸೆಮಣೆಯಲ್ಲಿ ಕುಳಿತಿದ್ದ ಪ್ರೇಯಸಿಯ ಕೊರಳಿಗೆ ದೂರದಿಂದಲೇ ಮಾಲೆ ಎಸೆದ ಯುವಕ!

ನ್ಯೂಸ್ ಕನ್ನಡ ವರದಿ(23-04-2018): ತನ್ನ ಪ್ರೇಯಸಿಗೆ ಬೇರೆ ಹುಡುಗನೊಂದಿಗೆ ಮದುವೆಯಾಗುವುದನ್ನು ತಿಳಿದ ಆಕೆಯ ಗೆಳೆಯ ವರಮಾಲೆಯೊಂದಿಗೆ ಮದುವೆ ಮಂಟಪಕ್ಕೆ ಬಂದು, ದೂರದಿಂದಲೇ ತಾನು ತಂದಿದ್ದ ವರಮಾಲೆಯನ್ನು ಆಕೆಯ ಕೊರಳಿಗೆ ಎಸೆದು ಪೇಚಿಗೆ ಸಿಲುಕಿದ ಪ್ರಸಂಗವು ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಿಜ್ನೂರ್‌ ಗ್ರಾಮದಲ್ಲಿ ಮದುವೆಯೊಂದು ನಡೆಯುತ್ತಿತ್ತು. ಮದುಮಗ-ಮದುಮಗಳು ಅದಾಗಲೇ ಮಂಟಪದಲ್ಲಿ ಕುಳಿತುಬಿಟ್ಟಿದ್ದರು. ಪುರೋಹಿತರು ಮದುವೆಯ ಶಾಸ್ತ್ರಗಳಲ್ಲಿ ತಲ್ಲೀನರಾಗಿದ್ದರು. ಅಷ್ಟರಲ್ಲಿ ಅಲ್ಲಿಗೆ ರಾಹುಲ್‌ ಎಂಬ 24 ವರ್ಷದ ಯುವಕ ಹಾರದೊಂದಿಗೆ ಬೈಕಿನಲ್ಲಿ ಬರುತ್ತಾನೆ. ಮದುವೆ ಮಂಟಪಕ್ಕೆ ಬಂದವನೇ ತಾನು ತಂದಿದ್ದ ವರಮಾಲೆಯನ್ನು ಮದುಮಗಳತ್ತ ಎಸೆಯುತ್ತಾನೆ. ಅದು ನಿಖರವಾಗಿ ಆಕೆಯ ಕೊರಳಿಗೇ ಹೋಗಿ ಬೀಳುತ್ತದೆ. ಪಕ್ಕದಲ್ಲಿ ಕುಳಿತಿದ್ದ ಮದುವೆ ಗಂಡು ಏನಾಯಿತೆಂದು ನೋಡುವಷ್ಟರಲ್ಲಿ ಮದುಮಗಳು ಕೂಡ ನೇರವಾಗಿ ಹಾರ ಎಸೆದವನ ಬಳಿಗೆ ತೆರಳಿ ತನ್ನ ಕೈಯಲ್ಲಿದ್ದ ಹಾರವನ್ನು ಆತನ ಕೊರಳಿಗೆ ಹಾಕುತ್ತಾಳೆ.

ಸೇರಿದ್ದ ನೆಂಟರಿಷ್ಟರು ಅತಿಥಿಗಳು ಏನಾಗುತ್ತಿದೆಯೆಂದು ಆಶ್ಚರ್ಯದಿಂದ ನೋಡುವಷ್ಟರಲ್ಲಿ ಸೇರಿದ್ದವರು ರಾಹುಲ್ ನನ್ನು ಹಿಡಿದು ಥಳಿಸುತ್ತಾರೆ. ಪೋಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದಾಗ ರಾಹುಲ್ ಹಾಗೂ ಮದುಮಗಳು ಪ್ರೇಮಿಗಳಾಗಿದ್ದು, ದೈಹಿಕ ಸಂಪರ್ಕವನ್ನೂ ಮಾಡುತ್ತಿದ್ದರು. ಹುಡುಗಿ ಕೆಳಜಾತಿಯವಳಾಗಿದ್ದರೆ ಹುಡುಗ ಮೇಲ್ಜಾತಿಯವನಾಗಿದ್ದ ಎಂದು ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ

Leave a Reply

Your email address will not be published. Required fields are marked *