ಓಲಾ ಕ್ಯಾಬ್ ಚಾಲಕ ಮುಸ್ಲಿಮನೆಂಬ ಕಾರಣಕ್ಕೆ ಬುಕಿಂಗ್ ತಿರಸ್ಕರಿಸಿದ ವಿಎಚ್’ಪಿ ಸದಸ್ಯ!

ನ್ಯೂಸ್ ಕನ್ನಡ ವರದಿ-(23.04.18): ವಿಹೆಚ್ ಪಿ ಸದಸ್ಯನೊಬ್ಬ ತಾನು ಬುಕ್ ಮಾಡಿಸಿದ್ದ ಓಲಾ ಕ್ಯಾಬ್ ವಾಹನದ ಚಾಲಕ ಮುಸ್ಲಿಮ್ ಎಂಬ ಕಾರಣಕ್ಕೆ ವಾಹನವನ್ನು ತಿರಸ್ಕರಿಸಿ ಬುಕಿಂಗ್ ಕ್ಯಾನ್ಸಲ್ ಮಾಡಿದ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.

ತಾನು ಎಪ್ರಿಲ್ 20ರಂದು ಓಲಾ ಕ್ಯಾಬ್ ಮೂಲಕ ಟ್ಯಾಕ್ಸಿ ಬುಕ್ ಮಾಡಿದ್ದೆ. ಬುಕ್ ಮಾಡಿದ್ದ ಟ್ಯಾಕ್ಸಿ ಚಾಲಕನ ಹೆಸರು ಮಸೂದ್ ಅಸ್ಲಾಮ್ ಎಂದಿದ್ದ ಕಾರಣ ತಾನು ಅದನ್ನು ತಿರಸ್ಕರಿಸಿದೆ. ಯಾಕೆಂದರೆ ನಾನು ಜಿಹಾದಿಗಳಿಗೆ ಹಣವನ್ನು ನೀಡಲು ಬಯಸುವುದಿಲ್ಲ ಎಂದು ಅಯೋದ್ಯೆ ಮೂಲದ ವಿಶ್ವ ಹಿಂದೂ ಪರಿಷತ್ ಸದಸ್ಯನಾದ ಲಖನೌ ಐಟಿ ಉದ್ಯೋಗಿ ಅಭಿಶೇಕ್ ಮಿಶ್ರಾ ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾನೆ.

ಅಭಿಷೇಕ್ ನ ಈ ಟ್ವೀಟ್ ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಅನೇಕರು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಯೋಗಿ ಆದಿತ್ಯನಾಥರನ್ನು ಒತ್ತಾಯಿಸಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್ ಹಾಗೂ ಮಹೇಶ್ ಶರ್ಮ ಮೊದಲಾದವರು ಟ್ವೀಟರ್ ನಲ್ಲಿ ಈತನ ಫಾಲೋವರ್ಸ್ ಆಗಿದ್ದಾರೆ.

Leave a Reply

Your email address will not be published. Required fields are marked *