ಉಮ್ರಾ ಯಾತ್ರಾರ್ಥಿಗಳಿಗೆ ಜಬಲ್ ನೂರ್ ಸೇರಿದಂತೆ ಹಲವು ಸ್ಥಳಗಳಿಗೆ ಸಂದರ್ಶನ ನಿಷೇಧ!

ನ್ಯೂಸ್ ಕನ್ನಡ ವರದಿ(23-04-2018): ಪವಿತ್ರ ಉಮ್ರಾ ಯಾತ್ರೆಗಾಗಿ ವಿಶ್ವದಾದ್ಯಂತ ಮಕ್ಕಾಕ್ಕೆ ಬರುವ ಯಾತ್ರಾರ್ಥಿಗಳಿಗೆ ಹಿರಾ ಗುಹೆಯಿರುವ ಮಕ್ಕಾದ ಜಬಲ್ ನೂರ್ ಪರ್ವತವನ್ವು ಸಂದರ್ಶಿಸುವುದು ನಿಶೇಧಿಸಿ ಸೌದಿ ಅರೇಬಿಯಾ ಹಜ್ ಹಾಗೂ ಉಮ್ರಾ ಸಚಿವಾಲಯವು ಆದೇಶ ಹೊರಡಿಸಿದೆ.

ಪ್ರವಾದಿ ಮುಹಮ್ಮದ್ ಪೈಗಂಬರರಿಗೆ ದಿವ್ಯ ಸಂದೇಶ ದೊರೆತ ಸ್ಥಳವಾದ ಜಬಲ್ ನೂರ್ ಪರ್ವತವನ್ನು ದಿನನಿತ್ಯ ಸಾವಿರಾರು ಯಾತ್ರಾರ್ಥಿಗಳು ಸಂದರ್ಶಿಸುತ್ತಿದ್ದು, ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಕಾನೂನು ಜಾರಿಗಳಿಸಲಾಗಿದೆ ಮಾತ್ರವಲ್ಲ ಕೆಲವು ಯಾತ್ರಾರ್ಥಿಗಳು ಇಲ್ಲಿ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಕೂಡ ಸಂದರ್ಶನ ನಿಷೇಧಿಸಿದ ಮತ್ತೊಂದು ಕಾರಣವೆಂದು ಸಚಿವಾಲಯವು ಸ್ಪಷ್ಟೀಕರಿಸಿದೆ. ಈ ಪರ್ವತವನ್ನು ಏರುವ ಸಮಯದಲ್ಲಿ ಅನೇಕರು ಕಾಲು ಜಾರಿ ಬಿದ್ದು ಮೃತ ಪಟ್ಟಿದ್ದರೆ ಇನ್ನೂ ಕೆಲವು ಯಾತ್ರಾರ್ಥಿಗಳು ವಿಷಯುಕ್ತ ಹಾವು ಕಡಿತದಿಂದ ಸಾವನ್ನಪ್ಪಿದ್ದ ಘಟನೆಗಳೂ ವರದಿಯಾಗಿದ್ದವು.

ಹಜ್ ಹಾಗೂ ಉಮ್ರಾ ಪ್ಯಾಕೇಜುಗಳಲ್ಲಿ ಇನ್ನು ಮುಂದೆ ಜಬಲ್ ನೂರ್ ಸಂದರ್ಶನವನ್ನು ಸೇರಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ ಹಜ್ ಸಚಿವಾಲಯವು ನಿಯಮವನ್ನು ಉಲ್ಲಂಘಿಸುವವರಿಗೆ 5000 ರಿಯಾಲ್ ವರೆಗೆ ದಂಢ ವಿಧಿಸಲಾಗುವುದಲ್ಲದೆ ಅಂತವರ ವಿರುದ್ಧ ಕಠಿನ ಕಾನೂನು ಜಾರಿಗೆಗೊಳಿಸಲಾಗುವುದೆಂದು ಅದು ಸ್ಪಷ್ಟ ಪಡಿಸಿದೆ.

ಸಂದರ್ಶನ ನಿಷಿದ್ಧವಾಗಲಿರುವ ಸ್ಥಳಗಳ ಪಟ್ಟಿ

ಮಿನಾ
ಅರಫಾ ಬೆಟ್ಟ (ಮೌಂಟ್ ಅರಫಾ)
ಮಸ್ಜಿದ್ ನಿಮ್ರಾ
ಮಸ್ಜಿದ್ ಜಿನ್ನ್
ಜಮರಾತ್
ಪ್ರವಾದಿ ಇಸ್ಮಾಯೀಲ್ ರ ಬಲಿದಾನಕ್ಕೆ ಸಿದ್ಧತೆ ನಡೆಸಿದ ಸ್ಥಳ
ಗಾರ್ ಸೌರ್

ಮುಂತಾದ ಹಲವು ಚರಿತ್ರೆಯ ಐತಿಹಾಸಿಕ ಸ್ಥಳಗಳ ಸಂದರ್ಶನವು ನಿಷೇಧಿಸುವ ಸಾದ್ಯತೆಯಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *