ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್!

ನ್ಯೂಸ್ ಕನ್ನಡ ವರದಿ(23-04-2018): ಭಾರತದ ಟೆನಿಸ್ ತಾರೆ ಹಾಗೂ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಹೈಬ್ ಮಲಿಕ್ ದಂಪತಿಗಳು ತಮ್ಮ ಪ್ರಥಮ ಮಗುವಿನ ನಿರಿಕ್ಷೆಯಲಿದ್ದಾರೆ. ಈ ಕುರಿತು ಸಾನಿಯಾ ಮಿರ್ಝಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಸಾನಿಯಾ ಮಿರ್ಝಾ ಅವರ ಈ ಪೋಸ್ಟನ್ನು ಶೋಯೆಬ್ ಮಲಿಕ್ ಕೂಡ ಶೇರ್ ಮಾಡಿದ್ದು, ತಮ್ಮ ಮಗುವಿನ ನಾಮವು ಮಿರ್ಝಾ ಮಲಿಕ್ ಎಂಬ ಹೆಸರಿನಿಂದ ಕೂಡಿರುತ್ತದೆ ಎಂಬ ಸೂಚನೆಯನ್ನೂ ನೀಡಿದ್ದಾರೆ.

ಇಂದು ನಾನು ನಿಮಗೆ ನಮ್ಮ ರಹಸ್ಯಗಳನ್ನು ಬಿಚ್ಚಿಡುತ್ತೇವೆ. ನಮಗೆ ಹೆಣ್ಣು ಮಗುವಾಗಬೇಕೆಂದು ನಾನು ಹಾಗೂ ಶೋಯೆಬ್ ಬಯಸಿದ್ದು, ನಮ್ಮ ಮಗಳನ್ನು ಮಿರ್ಝಾ ಮಲಿಕ್ ಎಂಬ ಉಪನಾಮದೊಂದಿಗೆ ಕರೆಯಲು ನಾವು ನಿರ್ಧರಿಸಿದ್ದೇವೆ ಎಂದು ಇತ್ತೀಚೆಗೆ ಗೋವಾ ಫೆಸ್ಟ್ ನಲ್ಲಿ ನಡೆದ ಲಿಂಗ ತಾರತಮ್ಯ ಕಾರ್ಯಕ್ರಮದಲ್ಲಿ ಸಾನಿಯಾ ಹೇಳಿದ್ದರು.

Leave a Reply

Your email address will not be published. Required fields are marked *