ಕುತ್ತಿಗೆಯ ಈ ಭಾಗದಲ್ಲಿ ಐಸ್ ತುಂಡು ಇಟ್ಟರೆ ಏನೆಲ್ಲಾ ಪ್ರಯೋಜನವಿದೆ ಗೊತ್ತೇ?! ಮುಂದೆ ಓದಿ..
ಪಾನಿಯಗಳನ್ನು ಸೇವಿಸುವಾಗ ತಂಪಾಗಿರಲೆಂದು ಐಸ್ ತುಂಡುಗಳನ್ನು ಸೇರಿಸಿ ಸೇವಿಸುತ್ತೇವೆ. ಆದರೆ, ಐಸ್ ತುಂಡುಗಳನ್ನು ನಮ್ಮ ದೇಹದ ಮೇಲೆ ಉಪಯೋಗಿಸಿದರೆ ನಮ್ಮ ಆರೋಗ್ಯದ ಮೇಲಾಗುವ ಲಾಭಗಳ ಬಗ್ಗೆ ನಿಮಗೆ ಗೊತ್ತಾ…? ನಿಮಗೆ ವಯಸ್ಸು ಹೆಚ್ಚಾಗುತ್ತಿದ್ದರೂ… ಸದಾಕಾಲ ಉತ್ಸಾಹವಾಗಿ, ಆನಂದವಾಗಿರಲು ಒಂದು ಉತ್ತಮ ಸಲಹೆ ಯನ್ನು ನೀಡುತ್ತಿದ್ದೇವೆ…ಅದುವೇ…ಫೆಂಗ್ ಫೂ ಪಾಯಿಂಟ್ ಪ್ರೆಸ್..
ಏನಪ್ಪಾ ಇದು ಅಂದುಕೊಂಡ್ರಾ? ನಮ್ಮ ಬುರುಡೆಯ ಹಿಂಭಾಗದಲ್ಲಿ, ಕತ್ತಿನ ಮಧ್ಯ ಭಾಗದಲ್ಲಿ ಮೊದಲಾಗುವ ಕಡೆಯಿರುತ್ತದೆ ‘ಫೆಂಗ್ ಫೂ ಪಾಯಿಂಟ್’. ಬೋರಲು ಮಲಗಿ ಇಲ್ಲಿ 20 ನಿಮಿಷಗಳಕಾಲ ಐಸ್ ತುಂಡನ್ನು ಇಟ್ಟಲ್ಲಿ ಶರೀರ ಉತ್ತೇಜಿತ ಗೊಳ್ಳುತ್ತದೆ.
ಫೆಂಗ್ ಫೂ ಪಾಯಿಂಟ್ ಯಾವಾಗ ಪ್ರೆಸ್ ಮಾಡಬೇಕು..? ಒಳ್ಳೆಯ ಫಲಿತಾಂಶ ಸಿಗಬೇಕಾದರೆ ಪ್ರತೀ ದಿನ ಬೆಳಿಗ್ಗೆ ಉಪಾಹಾರ ಸೇವಿಸುವುದಕ್ಕೆ ಮುನ್ನ ಹಾಗೂ ರಾತ್ರಿ ಮಲಗುವ ಮುನ್ನ ಇದನ್ನು ಮಾಡಬೇಕು.
ಇದರಿಂದ ಆರೋಗ್ಯಕ್ಕಾಗುವ ಉಪಯೋಗಗಳು:
ಕೆಲವು ರೀತಿಯ ತಲೆನೋವು, ಹಲ್ಲು ನೋವು, ನೆಗಡಿಯನ್ನು ಕಡಿಮೆಗೊಳಿಸುತ್ತದೆ.
ಜೀರ್ಣಾಂಗ ವ್ಯವಸ್ಥೆ ಚುರುಕುಗೊಂಡು, ಶ್ವಾಸ ಕ್ರಿಯೆ, ಹೃದಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.
ಥೈರಾಯಿಡ್ ಸಮಸ್ಯೆ, ಋತು ಸಮಸ್ಯೆಗಳು ಕಡಿಮೆಯಾಗುತ್ತವೆ.
‘ಫೆಂಗ್ ಫೂ ಪಾಯಿಂಟ್’ ಮೇಲೆ ಐಸ್ ತುಂಡನ್ನು ಇಡುವುದರಿಂದ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ.
ಈರೀತಿ ಮಾಡುವುದರಿಂದ ಶರೀರ ಉಲ್ಲಸಿತವಾಗಿರುತ್ತದೆಂದು ಸಾಂಪ್ರದಾಯಿಕ ಚೀನಾ ವೈದ್ಯಪದ್ಧತಿಯಲ್ಲಿ ತಿಳಿಸಲಾಗಿದೆ.