ಪ್ರೀತಿಸಿದ್ದ ಹುಡುಗ ಮದುವೆಯ ವೇಳೆ ನಾಪತ್ತೆ; 2 ದಿನ ಮನೆ ಮುಂದೆ ಧರಣಿ ಕುಳಿತ ವಧು!

ಭುವನೇಶ್ವರ: ಮದುವೆಯ ವೇಳೆ ವರ ಗೈರಾಗಿದ್ದಕ್ಕೆ ವಧು ಧರಣಿಗೆ ಕುಳಿತಿರುವ ಘಟನೆ ಒಡಿಶಾದ ಬ್ರಹ್ಮನಗರದಲ್ಲಿ ನಡೆದಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಪುತ್ರಿ ಮತ್ತು ವೈದ್ಯ ಹುಡುಗ ಪ್ರೀತಿಸುತ್ತಿದ್ದರು. ಇವರಿಬ್ಬರು ಪ್ರೀತಿಸಿದ್ದ ಪರಿಣಾಮ ಪ್ರಾರಂಭದಲ್ಲಿ ಕುಟುಂಬದವರ ವಿರೋಧ ವ್ಯಕ್ತವಾಗಿತ್ತು. ಆದರೂ ಸಹ ಎರಡು ಕುಟುಂಬಗಳು ಮಾತುಕತೆ ನಡೆಸಿ ಸೋಮವಾರ ಹಿಂದೂ ಸಂಪ್ರದಾಯದಂತೆ ವಿವಾಹವನ್ನು ನಿಗದಿಪಡಿಸಲಾಗಿತ್ತು. ಆದರೆ ಆ ದಿನ ವರ ಮದುವೆ ಮಂಟಪಕ್ಕೆ ಬರಲಿಲ್ಲ.

ಇದರಿಂದ ನೊಂದ ವಧು ವರನ ಮನೆಗೆ ಬಂದು ಈ ಬಗ್ಗೆ ವಿಚಾರಿಸಿದಾಗ ವರನ ಪೋಷಕರು ಬಾಗಿಲನ್ನು ಮುಚ್ಚಿಕೊಂಡಿದ್ದಾರೆ. ಈ ಹಿನ್ನೆಲೆ ವಧು ಮಹಿಳೆ ಸಾಮಾಜಿಕ ಕಾರ್ಯಕರ್ತೆ ಪ್ರಮೀಳಾ ತ್ರಿಪಾಠಿ ಅವರನ್ನು ಸಂಪರ್ಕಿಸಿದ್ದು, ಅವರೊಂದಿಗೆ ಧರಣಿ ಕುಳಿತುಕೊಂಡಿದ್ದಾಳೆ. 2ನೇ ದಿನಕ್ಕೆ ಧರಣಿ ಮುಂದುವರೆದಿದೆ.

ಬೈದ್ಯನಾಥಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಮ್ ಕುಮಾರ್ ಈ ಕುರಿತು ಮಾತನಾಡಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನ್ಯಾಯಾಲಯದ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ. ಧರಣಿ ಸ್ಥಳದಲ್ಲಿ ಶಾಂತಿಯನ್ನು ಕಾಪಾಡಲು ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ಶಾಂತಿ ಕಾಪಾಡಲು ಭದ್ರತೆ ವಿಧಿಸಲಾಗಿದೆ ಎಂದು ಹೇಳಿದರು.

ಮದುವೆ ನಿಂತಿದ್ದರಿಂದ ವಧು ನೊಂದು ಇದಕ್ಕೆ ಕಾರಣ ತಿಳಿದುಕೊಳ್ಳಲು ವರನ ಮನೆಯನ್ನು ಪ್ರವೇಶಿಸಲು ಪ್ರಯತ್ನಿಸಿದ್ದಳು. ಆದರೆ ಅವರ ಪೋಷಕರು ಬಾಗಿಲನ್ನು ಮುಚ್ಚಿದ್ದು, ವಧು ಧರಣಿಗೆ ಕುಳಿತುಕೊಂಡಿದ್ದಾಳೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *