ಸಿಂಹದ ಗುಹೆಗೇ ನುಗ್ಗಿದ ವ್ಯಕ್ತಿ ! ಆಮೇಲೆನಾಯ್ತು..? ಬೆಚ್ಚಿ ಬೀಳಿಸುವ ವಿಡಿಯೋ ಇಲ್ಲಿದೆ ನೋಡಿ…

ಹೈದರಾಬಾದ್​ನ ನೆಹರೂ ಝೂವಲಾಜಿಕಲ್ ಪಾರ್ಕ್‌ನಲ್ಲಿ ಪ್ರವೇಶವಿಲ್ಲದ ಪ್ರದೇಶವಾದ ಸಿಂಹ ವಾಸಿಸುವ ಸ್ಥಳದಲ್ಲಿ ಅಲೆದಾಡುತ್ತಿದ್ದ ವ್ಯಕ್ತಿಯನ್ನು ರಕ್ಷಾಣಾ ಸಿಬ್ಬಂದಿ ರಕ್ಷಿಸಿದ್ದಾರೆ. 31 ವರ್ಷದ ವ್ಯಕ್ತಿಯೋರ್ವ ಹೈದರಾಬಾದ್​ನ ಮೃಗಾಲಯದೊಳಗೆ ನುಗ್ಗಿದ್ದಾನೆ. ಸಿಂಹದ ಗುಹೆಯ ಮೇಲೆ ಕುಳಿತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಂಡೆಯ ಮೇಲೆ ವ್ಯಕ್ತಿ ಕುಳಿತಿದ್ದರೆ ಕೆಳಗಿನಿಂದ ದೈತ್ಯ ಸಿಂಹವೊಂದು ಆತನನ್ನೇ ನೋಡುತ್ತಿದೆ. ಈ ಭಯಾನಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮನುಷ್ಯನು ಎತ್ತರದ ಬಂಡೆಯ ಮೇಲೆ ಕುಳಿತಿದ್ದಾನೆ. ಸಿಂಹವು ವ್ಯಕ್ತಿಯನ್ನೇ ದಿಟ್ಟಿಸಿ ನೋಡುತ್ತಿದೆ. ಮೃಗಾಲಯದಲ್ಲಿ ನೆರೆದಿದ್ದ ಜನರು ಕಿರುಚಾಡುತ್ತಿದ್ದು, ಜಾಗರೂಕರಾಗಿರಿ ಎಂದು ಕೂಗುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ವ್ಯಕ್ತಿಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿ ಆತನ ವಿರುದ್ಧ ದೂರು ದಾಖಲಿಸಲಾಗಿದೆ. ವ್ಯಕ್ತಿಯ ಹೆಸರು ಸಾಯಿ ಕುಮಾರ್ ಎಂಬುದು ತಿಳಿದು ಬಂದಿದೆ.

ಹೈದರಾಬಾದ್​ ನೆಹರೂ ಝೂವಾಲಜಿಕಲ್ ಪಾರ್ಕ್ ಹೇಳಿರುವ ಪ್ರಕಾರ, ಸಾಯಿ ಕುಮಾರ್, ಸಾರ್ವನಿಕ ಪ್ರವೇಶವಿಲ್ಲದ ಸಿಂಹದ ಆವರಣದ ಒಳಗೆ ಜಿಗಿದಿದ್ದಾರೆ. ಬಳಿಕ ಬಂಡೆಯ ಮೇಲೆ ನಡೆಕೊಂಡು ಹೋಗಿದ್ದಾರೆ ಎಂದು ಹೇಳಿದೆ. ಹೈದರಾಬಾದ್ ನೆಹರು ಝೂವಾಲಜಿಕಲ್ ಪಾರ್ಕ್​ನಲ್ಲಿ ಸಂಪೂರ್ಣವಾಗಿ ನಿಷೇಧಿತ ಪ್ರದೇಶವಾಗಿರುವ ಸಿಂಹದ ಗುಹೆಯ ಬಳಿ ವ್ಯಕ್ತಿ ಪ್ರವೇಶ ಮಾಡಿದ್ದಾನೆ. ವ್ಯಕ್ತಿಯನ್ನು ಅಪಾಯದಿಂದ ರಕ್ಷಿಸಿದ ರಕ್ಷಣಾ ಸಿಬ್ಬಂದಿ ಬಹದ್ದೂರ್​ಪುರ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *