ಅಪ್ರಾಪ್ತ ಮಗಳ ಮೇಲೆಯೇ ಮೂರು ತಿಂಗಳ ಕಾಲ ನಿರಂತರ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಪಾಪಿ ತಂದೆ

ವಿಕಾರಾಬಾದ್: ಕ್ರೂರಿ ತಂದೆ ತನ್ನ ಅಪ್ರಾಪ್ತ ಮಗಳ ಮೇಲೆಯೇ ಮೂರು ತಿಂಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದು, ಬಾಲಕಿ ಈಗ ಗರ್ಭಿಣಿಯಾಗಿರುವ ಹೇಯ ಕೃತ್ಯ ತೆಲಂಗಾಣದ ವಿಕಾರಾಬಾದ್​​ನ ಮೊಮಿನ್​​ಪೇಟ್​​​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂಗಾರೆಡ್ಡಿಯ ಪತಂಚೆರುವುದಲ್ಲಿ ಇವರು ವಾಸವಾಗಿದ್ದರು. 15 ವರ್ಷದ ಬಾಲಕಿ ಕಸ್ತೂರಿ ಬಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕೆಲ ತಿಂಗಳ ಹಿಂದೆ ಕೋವಿಡ್‌ ಲಾಕ್​ಡೌನ್​ ಆಗಿದ್ದ ಕಾರಣ ಬಾಲಕಿ ಪೋಷಕರೊಂದಿಗೆ ಉಳಿದುಕೊಳ್ಳಲು ಮನಗೆ ಆಗಮಿಸಿದ್ದಾಳೆ.

ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದ ಬಾಲಕಿಯ ತಂದೆ ಮಧ್ಯಾಹ್ನ ಊಟಕ್ಕಾಗಿ ಮನೆಗೆ ಬರುತ್ತಿದ್ದ. ಆದರೆ ಒಂದು ದಿನ ಮಗಳು ಮನೆಯಲ್ಲಿ ಒಬ್ಬಳೇ ಇದ್ದದ್ದನ್ನು ಕಂಡು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಘಟನೆ ಸಂಬಂಧ ಆಕೆಗೆ ಪ್ರಾಣ ಬೆದರಿಕೆ ಹಾಕಿ ದುಷ್ಕೃತ್ಯ ಮುಂದುವರೆಸಿದ್ದಾನೆ ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಬಾಲಕಿಯ ಅಜ್ಜಿ ತೀರಿಕೊಂಡಿದ್ದು, ವಿಕಾರಾಬಾದ್​​ ಜಿಲ್ಲೆಯ ಮೊಮಿನ್​ಪೇಟೆಗೆ ಬಾಲಕಿ ತೆರಳಿದ್ದಳು. ಈ ವೇಳೆ ಜ್ವರದಿಂದ ಬಳಲುತ್ತಿದ್ದ ಮಗಳನ್ನು ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಗರ್ಭಿಣಿ ಆಗಿರುವುದು ತಿಳಿದಿದೆ. ನಂತರ ಬಾಲಕಿ ತಂದೆಯ ವಿಕೃತ ಮನಸ್ಥಿತಿ ಬಗ್ಗೆ ವಿವರಿಸಿದ್ದಾಳೆ.

ಈ ಸಂಬಂಧ ಬಾಲಕಿ ತಾಯಿ, ಪಾಪಿ ತಂದೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಲಕಿಯ ತಂದೆ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮೊಮಿನ್ ಪೇಟೆಯ ಸರ್ಕಲ್ ಇನ್ಸ್‌ಪೆಕ್ಟರ್ ಎಂ ವೆಂಕಟೇಶಂ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *