ನ್ಯೂಸ್ ಕನ್ನಡ ವರದಿ(18-05-2018): ಮಹತ್ವದ ಬೆಳವಣೆಗೆಯೊಂದರಲ್ಲಿ ವಾಟ್ಸಪ್ ಸಂದೇಶವೊಂದು ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗಳ ಲಂಚ ದರವನ್ನು ಬಹಿರಂಗ ಪಡಿಸಿದ್ದು, ಇದು ರಾಜ್ಯಾದ್ಯಂತ ಮಿಂಚಿನ ಸಂಚಲನವನ್ನುಂಟು ಮಾಡಿದ್ದು, ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರಕ್ಕೆ ತೀವೃ ಮುಜುಗರವನ್ನುಂಟು ಮಾಡಿದೆ.

ಲಂಚದ ಮೊತ್ತದ ವಿತರಣೆಯಲ್ಲಿ ಪೊಲೀಸರು ಪರಸ್ಪರ ಹೋರಾಡಿಕೊಳ್ಳಲು ತೊಡಗಿದರು.ಈ ಹೋರಾಟವು ಸಾರ್ವಜನಿಕರಿಗೆ ತಿಳಿಯುವಷ್ಟರ ಮಟ್ಟಿಗೆ ಮುಂದುವರಿಯಿತು. ನಂತರ ವಾಟ್ಸಾಪ್ ನಲ್ಲಿ  ಹರಡಿದ ಈ ಕಾನ್ಸ್ಟೇಬಲ್ ‘ದರ ಕಾರ್ಡ್’  ಪಟ್ಟಿಯು  ಡಿಜಿಪಿಯ ಕೈಸೇರಿತು. ತಕ್ಷಣ ಪ್ರಕರಣದ ಕುರಿತು ತನಿಖೆ ನಡೆಸುವಂತೆ  ಡಿ.ಜಿ.ಪಿ ನೋಯ್ಡಾ ಎಸ್ಎಸ್ಪಿ  ಅವರಿಗೆ ಆದೇಶಿಸಿದ್ದಾರೆ.

ಪ್ರಕರಣದ ಕುರಿತು ಈಗಾಗಲೇ ವಿಶೇಷ ಕಾರ್ಯಾಚರಣೆ ಪಡೆಯ 18 ಪೊಲೀಸ್ ಅಧಿಕಾರಿಗಳನ್ನು ಹಿಂಬಡ್ತಿಮಾಡಿ ವರ್ಗಾಯಿಸಲಾಗಿದೆ. ಈ ಮೆಸೇಜ್ ವೈರಲ್ ಆದ ಕಾರಣ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕೆಂದು ನೋಯ್ಡಾ ಎಸ್ಎಸ್ಪಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *