ಪಡುಬಿದ್ರಿ ಡೇಬೈಡೇ ಶೊರೂಮ್ ನಲ್ಲಿ ಹೊಚ್ಚ ಹೊಸ Redmi6 ಮೊಬೈಲ್ ಲಾಂಚ್!

ನ್ಯೂಸ್ ಕನ್ನಡ ವರದಿ: ಪಡುಬಿದ್ರಿಯ ಮುಖ್ಯ ರಸ್ತೆಯ ಧ್ರುವ ಕಾಂಪ್ಲೆಕ್ಸಿನಲ್ಲಿರುವ ಪ್ರತಿಷ್ಠಿತ ‘ಡೇ ಬೈ ಡೇ ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಸೆಂಟರ್’ನಲ್ಲಿ ಎಮ್ಐ ಬ್ರ್ಯಾಂಡ್ ನಿಂದ ಮಾರುಕಟ್ಟೆಗೆ ಬಂದ ಹೊಚ್ಚ ಹೊಸ ಮೊಡೆಲ್ ‘ರೆಡ್ಮಿ6’ ಮೊಬೈಲ್ ಫೋನ್ ಲಾಂಚ್ ಕಾರ್ಯಕ್ರಮ ನಡೆಯಿತು.

ಆಕರ್ಷಕ ವಿನ್ಯಾಸದ ಹೊಸ ರೆಡ್ಮಿ6 ಮೊಬೈಲನ್ನು ಪಡುಬಿದ್ರಿಯ ಡೇಬೈಡೇ ಮೊಬೈಲ್ ಶೊರೂಮ್ ನಲ್ಲಿ ಕೇಕ್ ಕತ್ತರಿಸಿ ಸಾಂಕೇತಿಕವಾಗಿ ಲಾಂಚ್ ಮಾಡಲಾಯಿತು. ಎಮ್ಐ ಬ್ರ್ಯಾಂಡ್ ಸ್ಟೇಟ್ ಹೆಡ್ ಸಾಜುರತ್ನಂ, ಸಿಟಿ ಸೇಲ್ಸ್ ಮ್ಯಾನೆಜರ್ ರವೀಂದ್ರ ಜಯರಾಮ್, ಡಿಸ್ಟ್ರಿಬ್ಯೂಟರ್ ನಿಕೋಲಸ್ ಕ್ಲವ್ಡಿ ಲೀವಿಸ್ ಹೊಸ ಮೊಡೆಲ್ ಮೊಬೈಲ್ ಬಿಡುಗಡೆ ಮಾಡಿದರು, ಈ ಸಂದರ್ಭದಲ್ಲಿ ಡೆಟುಡೇ ಸಂಸ್ಥೆಯ ಮಾಲಕ ಇಮ್ತಿಯಾಝ್, ಮಹೇಶ್, ಪ್ರಶಾಂತ್, ಜಾವೆದ್, ಅಬುಬಕ್ಕರ್ ಉಪಸ್ಥಿತರಿದ್ದರು.

ರೆಡ್ಮಿ 6 ವೈಶಿಷ್ಟ್ಯಗಳುಡುಯಲ್ ಕ್ಯಾಮರಾ ಜೊತೆಗೆ ಎಐ ಸಾಮರ್ಥ್ಯಗಳು: ಚಿತ್ರಗಳನ್ನು ಕ್ಕಿಕ್ಕಿಸಿಕೊಳ್ಳುವುದಕ್ಕಾಗಿ, ರೆಡ್ಮಿ 6 ಡ್ಯುಯಲ್-ಕ್ಯಾಮರಾ ಸೆಟಪ್ ಅನ್ನು 12MP + 5MP ಸಂವೇದಕ ಸಂಯೋಜನೆ ಮತ್ತು AI ಸಾಮರ್ಥ್ಯಗಳೊಂದಿಗೆ ಬಳಸುತ್ತದೆ. ಡುಯಲ್ ಕ್ಯಾಮರಾ ಸೆಟ್ ಅಪ್ ಚಿತ್ರದ ಕ್ವಾಲಿಟಿಯನ್ನು ಹೆಚ್ಚಿಸುತ್ತದೆ ಮತ್ತು ಕಡಿಮೆ ಬೆಳಕಿನ ಪರಿಸ್ಥಿತಿಯಲ್ಲೂ ಉತ್ತಮ ಫೋಟೋ ಬರುವಂತೆ ಮಾಡುತ್ತದೆ. ಗ್ರಾಹಕರಿಗೆ ಉತ್ತಮ ಅನುಭವ ನೀಡುವ ಉದ್ದೇಶದಿಂದಾಗಿ ಕಂಪೆನಿಯು ಎಐ ಮೋಡ್ ನ್ನು ಅಳವಡಿಸಿದೆ.

ಸೆಲ್ಫೀ ಕ್ಯಾಮರಾ ಜೊತೆಗೆ ಎಐ ಪ್ರೊಟ್ರೈಟ್ ಮೋಡ್:
ಸೆಲ್ಫೀ ಕ್ಯಾಮರಾವು 5ಎಂಪಿ ಸಾಮರ್ಥ್ಯವಿದ್ದು ಎಐ ಪ್ರೊಟ್ರೈಟ್ ಮೋಡ್ ನ್ನು ಹೊಂದಿದೆ. ಈ ವೈಶಿಷ್ಟ್ಯವು ನಿಮಗೆ ಸೆಲ್ಫೀಯನ್ನು ಬೋಕೇಷ್ ಎಫೆಕ್ಟ್ ನಲ್ಲಿ ಮತ್ತು ಬ್ಲರ್ರಿಂಗ್ ಬ್ಯಾಕ್ ಗ್ರೌಂಡ್ ನಲ್ಲಿ ತೆಗೆಯಲು ಅವಕಾಶ ನೀಡುತ್ತದೆ ಮತ್ತು ಎಲ್ಲಾ ಫೋಕಸ್ ನ್ನು ನಿಮ್ಮ ಮೇಲೆ ಇಟ್ಟುಕೊಳ್ಳಬಹುದಾಗಿದೆ.

ಮೀಡಿಯಾ ಟೆಕ್ ಹೆಲಿಯೋ ಪಿ22:
ಶಿಯೋಮಿ ರೆಡ್ಮಿ 6 ಆಕ್ಟಾ-ಕೋರ್- ಮೀಡಿಯಾ ಟೆಕ್ ಪಿ 22 (MT6762) ಪ್ರೊಸೆಸರ್ ನ್ನು ಹೊಂದಿದ್ದು 2GHz ಸಾಮರ್ಥ್ಯ ಹೊಂದಿದೆ.. ಈ ಪ್ರೊಸೆಸರ್ ಶೇಕಡಾ 48 ರಷ್ಟು ಕಡಿಮೆ ಶಕ್ತಿಯನ್ನು ಅಂದರೆ ಇತರೆ ಚಿಪ್ ಸೆಟ್ ಗಳಾದ 28ಎನ್ ಎಂ ಪ್ರೊಸೆಸ್ ನ್ನು ಗಿಂತ ಕಡಿಮೆ ಶಕ್ತಿಯನ್ನು ಬಳಕೆ ಮಾಡುತ್ತದೆ.

Leave a Reply

Your email address will not be published. Required fields are marked *