ಪಾಕ್ ಉಗ್ರರಿಗೆ ವಾಯುಸೇನೆಯಿಂದ ಖಡಕ್ ಪ್ರತ್ಯುತ್ತರ: ದೇಶಾದ್ಯಂತ ಸಂಭ್ರಮಾಚರಣೆ!

ನ್ಯೂಸ್ ಕನ್ನಡ ವರದಿ: ದೇಶವನ್ನೇ ತಲ್ಲಣಗೊಳಿಸಿದ್ದ ಫುಲ್ವಾಮಾ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಸುಳಿ ವೈಮಾನಿಕ ದಾಳಿ ನಡೆಸಿ ಉಗ್ರರ ಅಡಗುತಾಣವನ್ನು ದ್ವಂಸಗೊಳಿಸಿರುವುದಕ್ಕೆ ದೇಶಾದ್ಯಂತ ಸಂಭ್ರಮಾಚರಿಸಲಾಗುತ್ತಿದೆ. ರಾಜಧಾನಿ ದೆಹಲಿ, ಮುಂಬೈ, ಕೊಲ್ಕತ್ತಾ ಸೇರಿದಂತೆ ಅನೇಕ ನಗರಗಳಲ್ಲಿ ಜನರು ಫುಲ್ವಾಮಾ ಪ್ರತೀಕಾರದ ದಾಳಿಗೆ ಸಂತಸ ವ್ಯಕ್ತಪಡಿಸಿ ಸಂಭ್ರಮಿಸುತ್ತಿದ್ದಾರೆ.

ಇಂದು ಮುಂಜಾನೆ ನಡೆದ ವಾಯುದಾಳಿ ಸುದ್ದಿ ತಿಳಿಯುತ್ತಿದ್ದಂತೆ ಜನರು ಗುಂಪುಗೂಡಿ ಸಂಭ್ರಮಾಚರಣೆ ನಡೆಸಿದ ದೃಶ್ಯಗಳು ದೇಶದ ಹಲವು ನಗರಗಳಲ್ಲಿ ಕಂಡು ಬಂದವು. 40ಕ್ಕೂ ಹೆಚ್ಚು ಯೋಧರನ್ನು ಬಲಿ ಪಡೆದ ನಂತರ ದೇಶಾದ್ಯಂತ ಆಕ್ರೋಶ ಮಡುಗಟ್ಟಿತ್ತು. ಉಗ್ರರ ವಿರುದ್ಧ ದಾಳಿ ನಡೆಸಿ ತಕ್ಕ ಶಾಸ್ತಿ ಮಾಡುವಂತೆ ವ್ಯಾಪಕ ಒತ್ತಾಯಗಳು ಕೇಳಿ ಬಂದಿದ್ದವು ಈಗ ವಾಯು ದಾಳಿ ನಂತರ ಭಾರತೀಯರ ಆಕ್ರೋಶ ಕೊಂಚ ಮಟ್ಟಿಗೆ ತಣ್ಣಗಾಗಿದೆ.

ರಾಜ್ಯದಲ್ಲೂ ಹಲವೆಡೆ ಸಂಭ್ರಮ ಆಚರಿಸಲಾಗಿದೆ. ಕೊಪ್ಪಳದಲ್ಲಿ ವಿದ್ಯಾರ್ಥಿಗಳಿಂದ ವಿಜಯೋತ್ಸವ, ಗಂಗಾವತಿಯ ಶ್ರೀ ರಾಘವೇಂದ್ರ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆ ಮುಖಾಂತರ ವಿಜಯದ ಘೊಷಣೆ ಕೂಗಿ, ಪಟಾಕಿ ಸಿಡಿಸಿದಲ್ಲದೇ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂತಸವನ್ನು ಹಂಚಿಕೊಂಡರು.

ಇನ್ನು ಬೆಳಗಾವಿ ಕಪಿಲೇಶ್ವರ ದೇವಸ್ಥಾನದ ಆಡಳಿತ ವತಿಯಿಂದಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಮೈಸೂರಿನ ಜನ, ಅಗ್ರಹಾರ ವೃತ್ತದಲ್ಲಿ ತ್ರಿವಣ ಧ್ವಜ ಹಿಡಿದು ಯೋಧರ ಪರ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.

ಮಂಗಳೂರಿನ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ಭಾರತೀಯ ಸೇನೆಗೆ ಶಕ್ತಿ ತುಂಬುವಂತೆ ದೇವರಲ್ಲಿ ಪ್ರಾರ್ಥಿನೆ ಮಾಡಿಕೊಂಡಿದ್ದು, ಉಗ್ರರ ಮೇಲಿನ ದಾಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಕೋಲಾರ ನಗರದ ಹೊಸ ಬಸ್ ಸ್ಟಾಂಡ್ ಸರ್ಕಲ್ ನಲ್ಲಿ ಹಿಂದೂ ಪರ ಸಂಘಟನೆಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಇನ್ನೂ ಉತ್ತರ ಕನ್ನಡದ ಶಿರಸಿಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪಟಾಕಿ ಸಿಡಿಸಿ, ತಮಟೆ ಬಾರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಹೀಗೆ ರಾಜ್ಯದ ವಿವಿಧೆಡೆಯಲ್ಲಿ ಜನ ತಮ್ಮ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾ ಆಚರಣೆಯಲ್ಲಿ ಸಕ್ರಿಯವಾಗಿದ್ದರು

Leave a Reply

Your email address will not be published. Required fields are marked *