ಇಡೀ ಜಗತ್ತಿನಲ್ಲಿ ಸುಳ್ಳು ಹೇಳುವುದರಲ್ಲಿ ಪ್ರಧಾನಿ ಮೋದಿಗೆ ನೋಬೆಲ್ ಪ್ರಶಸ್ತಿ ನೀಡಬೇಕು: ವೀರಪ್ಪಮೊಯ್ಲಿ ಟೀಕೆ !
ನ್ಯೂಸ್ ಕನ್ನಡ ವರದಿ : ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣಾ ಪ್ರಚಾರದಲ್ಲಿ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸದ ಡಾ.ಎಂ.ವೀರಪ್ಪಮೊಯ್ಲಿ ಅವರು ಮಾತನಾಡಿ, ಮೋದಿ ವಿರುದ್ಧ ಹರಿಹಾಯ್ದರು. ಇಡೀ ಜಗತ್ತಿನಲ್ಲಿ ಸುಳ್ಳು ಹೇಳುವುದರಲ್ಲಿ ಪ್ರಧಾನಿ ಮೋದಿ ಮೊದಲಿಗರು.ಅವರಿಗೆ ಜಗತ್ ಪ್ರಸಿದ್ದ ನೋಬೆಲ್ ಪ್ರಶಸ್ತಿ ನೀಡಬೇಕು ಎಂದು ಹೇಳಿದರು.
5 ವರ್ಷಗಳ ಹಿಂದೆ ಲೋಕಸಭೆ ಚುನಾವಣೆ ಸಮಯದಲ್ಲಿ ಮೋದಿ ಈ ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇನೆ, ದೇಶದ ಪ್ರತಿ ಖಾತೆಗೆ ಜನ್ಧನ್ ಯೋಜನೆಯಲ್ಲಿ 15 ಲಕ್ಷ ಹಾಕುತ್ತೇನೆ. ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿ ಪ್ರಧಾನಿಯಾದ ಮೇಲೆ ಯಾವ ಭರವಸೆ ಈಡೇರಿಸಿದೆ ಜನರನ್ನು ವಂಚನೆ ಮಾಡಿದ್ದಾರೆ. ಅವರು ಸುಳ್ಳು ಹೇಳುವುದರಲ್ಲಿ ನಂ.1 ಪಟ್ಟ ಕೊಡಬೇಕಿದೆ. ಆದರೆ ನಮ್ಮ ಕಾಂಗ್ರೆಸ್ ಪಕ್ಷ ಹೇಳಿದ ಮಾತು ನಡೆದುಕೊಳ್ಳುತ್ತದೆ ಮೋದಿ ತರಹ ಸುಳ್ಳು ಹೇಳುವ ಅಗತ್ಯವಿಲ್ಲ, 18ನೇ ಮಹಾ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಈಗಾಗಲೇ ರಾಹುಲ್ ಗಾಂಧಿ ದೇಶದ 25 ಕೋಟಿ ಬಡವರಿಗೆ ಕನಿಷ್ಠ 72 ಸಾವಿರ ಹಾಕುವುದಾಗಿ ಘೋಷಿಸಿದ್ದಾರೆ ನಾವು ಹೇಳಿದಂತೆ ನಡೆಯುತ್ತೇವೆ ಎಂದರು.